ಉಡುಪಿ(ಮಾ.07): ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ದಿನಾಂಕ 23, 24 ಮತ್ತು 25 ಫೆಬ್ರವರಿ 2024 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು, ಇಲ್ಲಿ ನಡೆದ “ಯಕ್ಷೋತ್ಸವ 2024” ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಬಹುಮಾನಗಳಿಸಿದೆ.
ಒಟ್ಟು ಹನ್ನೊಂದು ತಂಡಗಳು ಮೊದಲ ಸುತ್ತಿನಲ್ಲಿ ಭಾಗವಹಿಸಿದ್ದು, ಸ್ವ ಆಯ್ಕೆಯ ಪ್ರಸಂಗವನ್ನು ಆಡಲು ಅವಕಾಶವಿತ್ತು. ಈ ಹನ್ನೊಂದು ತಂಡಗಳಲ್ಲಿ ಒಟ್ಟು ಐದು ತಂಡಗಳು ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದವು. ಎರಡನೇ ಸುತ್ತಿನಲ್ಲಿ ಎಲ್ಲಾ ತಂಡಗಳೂ “ಸುಧನ್ವಾರ್ಜುನ ಕಾಳಗ” ಎಂಬ ಪ್ರಸಂಗವನ್ನು ಪ್ರದರ್ಶಿಸಬೇಕಾಗಿತ್ತು. ತೆಂಕತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರು ಈ ಸ್ಪರ್ಧೆಯ ಮೌಲ್ಯಮಾಪನ ನಡೆಸಿದ್ದರು.
ಈ ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಗಣೇಶ್ ಪ್ರಸಾದ್ ನಾಯಕ್ ಇವರ ಹಾಸ್ಯ ವೇಷಕ್ಕೆ ದ್ವಿತೀಯ ಬಹುಮಾನ, ಗಣೇಶ್ ಪ್ರಸಾದ್ ಇವರ ರಾಜ ವೇಷಕ್ಕೆ ಪ್ರಥಮ ಬಹುಮಾನ ಮತ್ತು ತಂಡದ ಅತುö್ಯತ್ತಮ ಪ್ರದರ್ಶಕ ಪ್ರಶಸ್ತಿಯನ್ನು ಗಳಿಸಿದ್ದಾರೆ.