ಕುಂದಾಪುರ (ಡಿ,1): ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ,ಶಿವಪ್ಪನಾಯಕ ಅರಮನೆ ಶಿವಮೊಗ್ಗ ಇದರ ಸಹಾಯಕ ನಿರ್ದೇಶಕರು ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧಾರವಾಡ ಇದರ ಉಪನಿರ್ದೇಶಕ(ಪ್ರಭಾರ)ರಾಗಿರುವ ಶ್ರೀ ಶೇಜೇಶ್ವರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಹನುಮನಾಯಕ ಇವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಜಿಲ್ಲೆಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಭೂಗೋಳ ; ಒಂದು ಅಧ್ಯಯನ(ಪೂರ್ವ ಇತಿಹಾಸದ ಕಾಲದಿಂದ ಕ್ರಿ.ಶ 18ನೇ ಶತಮಾನದವರೆಗೆ)” ಎಂಬ ವಿಷಯದ ಕುರಿತು ಸಾದರಪಡಿಸಿದ […]
Day: December 1, 2021
ಶ್ರೇಷ್ಠ ಆರ್ ಶೇಟ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗಂಗೊಳ್ಳಿ(ನ ,30) : ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ನಡೆಸಲ್ಪಡುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿನ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಷ್ಠ ಆರ್ ಶೇಟ್ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಚೆಫ್ ಟಾಕ್ ಪ್ರೈವೇಟ್ ಲಿಮಿಟೆಡ್ : ಕೋಲಾರದ ಶಾಖೆ ಉದ್ಘಾಟನೆ
ಕುಂದಾಪುರ (ನ,30): ಗುಣಮಟ್ಟದ ಆಹಾರ ಮತ್ತು ಆತಿಥ್ಯದಲ್ಲಿ ದೇಶದಾದ್ಯಂತ ಹೆಸರುವಾಸಿಯಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದ ಚೆಫ್ ಟಾಕ್ ಪ್ರೈವೇಟ್ ಲಿಮಿಟೆಡ್ ನ ಕೋಲಾರ ಶಾಖೆ ಇತ್ತೀಚೆಗೆ ಉದ್ಘಾಟನೆಗೊಂಡಿತು. ಕೋಲಾರದ ನರಸಾಪುರದಲ್ಲಿನ ಶಾಖೆಯ ಉದ್ಘಾಟನೆಯಲ್ಲಿ ಮಾಜಿ ಶಾಸಕರಾದ ಶ್ರೀ ವರ್ತೂರ್ ಪ್ರಕಾಶ್ ,ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಗೋವಿಂದರಾಜು ಹಾಗೂ ಶ್ರೀ ಜೈನ ಯಕ್ಷೇಶ್ವರಿ ಮತ್ತು ಶ್ರೀ ಶನೇಶ್ವರ ಪಾತ್ರಿಗಳಾದ ವಿಜಯ್ ಪೂಜಾರಿ ಉಪ್ಪುಂದ ರವರು ಉಪಸ್ಥಿತರಿದ್ದು […]
ನೈಕಂಬ್ಳಿ: ಸಂಭ್ರಮದ ಕಾರ್ತಿಕ ದೀಪೋತ್ಸವ
ಮಾರಣಕಟ್ಟೆ (ನ,30): ಮಹಾಲಿಂಗೇಶ್ವರ ದೇವಸ್ಥಾನ ನೈಕಂಬ್ಳಿಯಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನ,29ರಂದು ಜರುಗಿತು. ದೀಪೋತ್ಸವ ಪ್ರಯುಕ್ತ ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನೆ , ಮಹಾ ಮಂಗಳಾರತಿ ಹಾಗೂ ಅನ್ನಪ್ರಸಾದ ಸೇವೆ ನೆರವೇರಿತು. ಜೀರ್ಣೋದ್ಧಾರ ಸಮಿತಿ ಪ್ರಮುಖರು, ಪ್ರೇರಣಾ ಯುವ ವೇದಿಕೆ ಸದಸ್ಯರು, ಊರ ಗಣ್ಯರು ಉಪಸ್ಥಿತರಿದ್ದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ತರಬೇತಿ ಶಿಬಿರ
ಶಿರ್ವ(ನ,30):ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು ಸಾಧ್ಯ, ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗ ಗುರುಗಳಾದ ಶ್ರೀ ರಂಜಿತ್ ಪುನರ್ ರವರು ಹೇಳಿದರು. ಅವರು ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ […]