ಮೂಡ್ಲಕಟ್ಟೆ( ಆ,23): ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ 9ನೇ ದಿನದ ದೀಕ್ಷಾರಂಭ ಕಾರ್ಯಕ್ರಮದ ಅಡಿಯಲ್ಲಿ “ಚೈತನ್ಯ ಚಿಲುಮೆ” ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಆಗಸ್ಟ್ 22 ರಂದು ಯಶಸ್ವಿಯಾಗಿ ನೆರವೇರಿತು.
ಸಂಸ್ಥೆಯ ಸ್ಥಾಪಕರಾದ ಐ.ಎಂ ಜಯರಾಮ್ ಶೆಟ್ಟರ ಕ್ರಿಯಾಶೀಲವಾದ ಚಟುವಟಿಕೆ ಮತ್ತು ಚೈತನ್ಯ ಶೀಲತೆಯನ್ನು ಸಂಸ್ಥೆಯು ಅನುಸರಿಸುತ್ತಿರುವುದು ಶ್ಲಾಘನೀಯವಾದದ್ದು, ಕೇವಲ ಶಿಕ್ಷಣದಿಂದ ವ್ಯಕ್ತಿತ್ವ ಬೆಳೆಯುವುದಿಲ್ಲ ಅದಕ್ಕೆ ಸಾಂಸ್ಕೃತಿಕ ಮತ್ತು ನೈಸರ್ಗಿಕ ಹಿನ್ನೆಲೆ ಬೇಕು, ಮಾನವೀಯತೆಯ ಭಾವನೆ ಬೇಕು ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತನ್ನ ಬದುಕನ್ನ ಕಟ್ಟಿಕೊಳ್ಳಬಹುದು, ಆಂತರಿಕ ಶಕ್ತಿಯನ್ನು ಚಿಲುಮೆಯ ರೂಪದಲ್ಲಿ ಹೊರ ತಂದಾಗ ಪ್ರತಿಯೊಬ್ಬರಲ್ಲಿರುವ ಅದ್ಭುತವಾದ ಚೈತನ್ಯ ಹೊರಹೊಮ್ಮುತ್ತದೆ ಜೊತೆಗೆ ನಿಸರ್ಗದೊಂದಿಗೆ ಬದುಕುವ ಮೂಲಕ ಅದ್ಭುತ ಪಾಠವನ್ನು ಕಲಿಯಲು ಈ ರೀತಿಯ ವಿವಿಧ ಸಂಘಗಳು ಬೆನ್ನೆಲುಬಾಗಿರುತ್ತದೆ. ನಿಮ್ಮ ಆತ್ಮ ಬಲದ ಮೇಲೆ ನಂಬಿಕೆಯಿಟ್ಟು ಯಶಸ್ವಿಯಾಗಿ ಎಂದು ಕಾಲೇಜಿನ ವಿವಿಧ ಸಂಘಗಳನ್ನು ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿಜಯಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತರಾದ, ಶ್ರೀ ಜಾನ್ ಡಿಸೋಜಾ ರವರು ಶುಭ ಹಾರೈಸಿ ಮಾತನಾಡಿದರು.
ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ ಕುಮಾರ್ ವಿವಿಧ ವೇದಿಕೆಯ ಕಾರ್ಯದರ್ಶಿ ಮತ್ತು ಜೊತೆ ಕಾರ್ಯದರ್ಶಿಗಳನ್ನು ಸಭೆಗೆ ಪರಿಚಯಿಸಿದರು ಮತ್ತು ಅದರ ಲೋಗೋಗಳನ್ನು ಬಿಡುಗಡೆ ಮಾಡಿದರು.
ಪ್ರಾಂಶುಪಾಲರಾದ ಡಾ. ಪ್ರತಿಭಾ ಪಾಟೇಲ್ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಎಂಜೆ ಬ್ರ್ಯಾಂಡ್ ಬಿಲ್ಡಿಂಗ್ ನ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ , ವಿದ್ಯಾರ್ಥಿಗಳು ಶಿಸ್ತಿನ ಚಟುವಟಿಕೆಗಳಿಗೆ ಒಳಗಾದಾಗ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಅದನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಪ್ರತಿಭಾ ಪಟೇಲರು ವಹಿಸಿದ್ದರು.
ತೃತೀಯ ಬಿಸಿಎ ನ ಕು. ನಯನ ಮತ್ತು ಕು. ಚೇತನ ಪ್ರಾರ್ಥನೆ ಗೈದರು, ದ್ವಿತೀಯ ಬಿಸಿಎ ನ ಕು.ರಶಿತಾ ಸ್ವಾಗತಿಸಿದರು, ದ್ವಿತೀಯ ಬಿಸಿಎ ನ ಕು. ಸಿಂಚನ ವಂದಿಸಿದರು, ತೃತೀಯ ಬಿಕಾಂ ನ ಕು.ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.