ಕುಂದಾಪುರ(ಜ.21): ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗದ ವತಿಯಿಂದ ಕೋಡ್ ಲ್ಯಾಬ್ ಸಿಸ್ಟಮ್ ಮಂಗಳೂರು ಇವರ ಸಹಯೋಗದೊಂದಿಗೆ ಯು.ಐ/ ಯು. ಎಕ್ಸ್ ಅಭಿವೃದ್ದಿ ರಿಯಾಕ್ಟ್ ಜಾವಾ ಸ್ಕ್ರಿಪ್ಟ್ ವಿಷಯದ ಕುರಿತು ಒಂದು ವಾರದ ತರಬೇತಿ ಕಾರ್ಯಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಆಧುನಿಕ ಐ.ಟಿ ಔದ್ಯೋಗಿಕ ಕ್ಷೇತ್ರದಲ್ಲಿ ಬಾರಿ ಬೇಡಿಕೆಈರುವ ಕೌಶಲ್ಯದರಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಾಫ್ಟ್ ವೆರ್ ಡೆವಲಪರ್ಸ್, ಪ್ಲೇಸ್ಮೆಂಟ್ ತರಬೇತಿದಾರರಾದ ಶ್ರೀ ಮೊಹಮ್ಮದ್ ಝಸೀಲ್, ಶ್ರೀ ಮಹಮ್ಮದ್ ಶಾಹಿದ್ ಮತ್ತು ಶ್ರೀ ಕಾರ್ತಿಕ್ ಎಚ್. ಎಸ್ ಮತ್ತು ಉಪ ಪ್ರಾಂಶುಪಾಲರು ಹಾಗೂ ಪ್ಲೇಸ್ಮೆಂಟ್ಆಫೀಸರ್ ಶ್ರೀ ಜಯಶೀಲ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ಲೇಸ್ಮೆಂಟ್ ಸಹ ಸಂಯೋಜಕರು ಹಾಗೂ ಇಂಗ್ಲಿಷ್ ಉಪನ್ಯಾಸಕರಾದ ಕು. ರಾಜೇಶ್ವರಿ ಆರ್ ಶೆಟ್ಟಿ ಯವರು ನಿರೂಪಿಸಿದರು.