ಹೈಕಾಡಿ( ಸೆ,01): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ಹೈಕಾಡಿ ಇವರ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ವೇಶ ಸ್ಪರ್ಧೆಆಗಸ್ಟ್ 23 ರ ಶುಕ್ರವಾರ ಹೈಕಾಡಿಯ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ಎಲ್ ಕೆ ಜಿ ಮತ್ತು ಯುಕೆಜಿ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನು ಬರೆದು ಶಾಲೆಯ ವಿದ್ಯಾರ್ಥಿ ನಾಯಕ ಶ್ರೇಯಸ್ ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿದ ಕುಮಾರಿ ಐಝಾ ಮರ್ಯಮ್ ಎಲ್ ಕೆ ಜಿ ವಿದ್ಯಾರ್ಥಿನಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಆವರ್ಸೆ ಸಿಆರ್ ಪಿ ಆಗಿರುವ ಶ್ರೀಮತಿ ಪ್ರತಿಭಾ ಇವರು ಸರಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ರೀಯೇಶನ್ಸ್ ನಂತಹ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಶ್ಲಾಘಿಸಿದರು,ಪ್ರೌಢ ಶಾಲಾ ಮುಖ್ಯೋಪಾಧ್ಯರು ಶ್ರೀ ಗಣೇಶ್ ಕಿಣಿ ಇವರು ಮಾತನಾಡಿ ಕೃಷ್ಣಾಷ್ಠಮಿ ಮಹತ್ವ ಮತ್ತು ಕಾರ್ಯಕ್ರಮವನ್ನು ಶಾಲೆಗಳಲ್ಲಿ ಮಾಡಿ ವಿದ್ಯಾರ್ಥಿ ಮತ್ತು ಪೋಷಕರು ಚಟುವಟಿಕೆಯಿಂದ ಪಾಲ್ಗೋಳ್ಳಲು ತಿಳಿಸಿದರು.
ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿರುವ ಶ್ರೀ ಕೃಷ್ಣಮೂರ್ತಿ ಹೈಕಾಡಿ ಇವರು ಸಂಸ್ಥೆಯ ಕಾರ್ಯ ಚಟುವಟಿಕೆ ಮತ್ತು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಶ್ರೀ ರವಿರಾಜ್ ಶೆಟ್ಟಿ, ಪ್ರಬಾರ ಮುಖ್ಯೋಪಾಧ್ಯಯರು, ಶಾಲಾ ಎಸ್.ಡಿ ಎಂ.ಸಿ ಅಧ್ಯಕ್ಷರಾಗಿರುವ ಶ್ರೀ ಕೃಷ್ಣ ಮರಕಾಲ , ಉಪಾದ್ಯಕ್ಷರಾದ ಶ್ರೀ ದಿನಕರ ಶೆಟ್ಟಿ ಏಜು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಲ್ ಕೆಜಿ ಯುಕೆಜಿ ಮುದ್ದು ಕೃಷ್ಣ ಮುದ್ದು ರಾಧೆ, 1ರಿಂದ ನಾಲ್ಕನೆ ತರಗತಿ ವಿದ್ಯಾರ್ಥಿಗಳಿಗೆ ಬಾಲಕೃಷ್ಣ ಮತ್ತು ಸಾರ್ವಜನಿಕ ವಿಭಾಗದಲ್ಲಿ ೦ಯಿಂದ 2 ವರ್ಷ ಮತ್ತು 2ರಿಂದ ನಾಲ್ಕು ವರ್ಷ ಒಳಗಿನ ಮಕ್ಕಳಿಗೆ ಬೆಣ್ಣೆ ಕೃಷ್ಣ ಸ್ಪರ್ಧೆ ಏರ್ಪಡಿಸಲಾಯಿತು. ಸುಮಾರು 75ಕ್ಕಿಂತ ಅಧಿಕ ವಿದ್ಯಾರ್ಥಿಗಳು ಸ್ಪರ್ಧೇಯಲ್ಲಿ ಭಾಗವಹಿಸಿ ಈ ಕೆಳಕಂಡ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು.
ಸಾರ್ವಜನಿಕ ವಿಭಾಗ 0 ಯಿಂದ 2 ವರ್ಷ:1.ಯಶ್ರೀ ಶೆಟ್ಟಿ ರಟ್ಟಾಡಿ 2 . ಶಿವನ್ಯ R ಬೆಳ್ವೆ 3. ಛಾಯಾ ಶೆಟ್ಟಿ.2 ರಿಂದ 4 ವರ್ಷವಿಭಾಗ:1. ಸಾಹಿತ್ಯ ಕೆ ಹೆಚ್ 2. ಆಯುಷ್ ಎಸ್ ಭಂಡಾರಿ,3. ಮೇಧಸ್ವಿ ಹುಯ್ಯಾರು.ಎಲ್ ಕೆಜಿ ಯುಕೆಜಿ ಮುದ್ದು ಕೃಷ್ಣ ವಿಭಾಗ:1. ಆದ್ವಿಕ ಎ ಕುಲಾಲ್, 2. ದಿಶಾ 3. ಸಾಮ್ರಾಟ್ .ಮುದ್ದು ರಾಧೆ ವಿಭಾಗ: 1. ನಾಗಶ್ರೀ 2. ಅದ್ವಿತಿ ಮೊಗವೀರ 3. ಆರಾಧ್ಯ ಎಲ್ .ಒಂದರಿಂದ ಎರಡನೇ ತರಗತಿ ಬಾಲಕೃಷ್ಣ : 1. ಅದ್ವಿತ್ ಎ ಕುಲಾಲ್ 1 ನೇ,2. ಪ್ರದಿತಿ ಪಿ ಶೆಟ್ಟಿ 2ನೇ ತರಗತಿ 3. ಆತ್ಮಿಕಾ 1ನೇ ತರಗತಿ. ನಾಲ್ಕು ಮತ್ತು ಐದನೇ ತರಗತಿ ಬಾಲಕೃಷ್ಣ: 1. ಶ್ರೀ ಪ್ರಿಯಾ 4ನೇ ತರಗತಿ,2. ಅಂಶು 3ನೇ ತರಗತಿ 3. ಸಾನಿಧ್ಯ ಡಿ 4ನೇ ತರಗತಿ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು ಮಧ್ಯಾಹ್ನ ಸಮಾರೋಪ ಸಮಾರಂಭದಲ್ಲಿ ಆವರ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಆರತಿ, ಶ್ರೀ ರವಿರಾಜ್ ಶೆಟ್ಟಿ, ಪ್ರಬಾರ ಮುಖ್ಯೋಪಾಧ್ಯಾಯರು, ಪಂಚಾಯತ್ ವಾರ್ಡ್ ಸದಸ್ಯರಾದ ಶ್ರೀ ಸಂತೋಷ ಶೆಟ್ಟಿ ಕೊಣ್ಣಿಮಕ್ಕಿ ,ಶ್ರೀಮತಿ ಶಮಿನಾ,ಶ್ರೀ ವಿಜಯ್ ಕುಮಾರ್ ಶೆಟ್ಟಿ ಕಾಸಾಡಿ, ಶ್ರೀ ದಿನಕರ ಶೆಟ್ಟಿ ಏಜು, ಶ್ರೀ ರಾಘವೇಂದ್ರ ಮಡಿವಾಳ , ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿರುವ ಶ್ರೀ ಕೃಷ್ಣಮೂರ್ತಿ ಹೈಕಾಡಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅತಿಥಿಗಳಿಂದ ಕೃಷ್ಣ ವೇಷ ಸ್ಪರ್ಧೆಯ ವಿಜೇತರರಿಗೆ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಂಸಾಪತ್ರ ವಿತರಿಸಲಾಯಿತು, ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ಸ ಟ್ರಸ್ಟ್ (ರಿ) ಹೈಕಾಡಿ ಕಾರ್ಯಕ್ರಮ ಮತ್ತು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿತು. ಶ್ರೀ ರವಿರಾಜ್ ಶೆಟ್ಟಿ, ಪ್ರಭಾರ ಮುಖ್ಯೋಪಾಧ್ಯಾಯರು, ಶ್ರೀಮತಿ ಜ್ಯೋತಿ, ಹಿರಿಯ ಶಿಕ್ಷಕಿ, ಶ್ರೀಮತಿ ಶುಭವತಿ, ಶ್ರೀಮತಿ ನಾಗರತ್ನ ,ಶ್ರೀ ಗಣೇಶ್ ,ಶ್ರೀಮತಿ ಸೌಮ್ಯ, ಕುಮಾರಿ ಅಕ್ಷತಾ ,ಕಿರಣ್ ಬಿ ಬಿ ,ಶ್ರೀಮತಿ ಲೀಲಾವತಿ ,ಶ್ರೀಮತಿ ಗೀತಾ ,ಶ್ರೀಮತಿ ರತಿ ,ಕುಮಾರಿ ಮಂಜುಳಾ ,ಶ್ರೀಮತಿ ಸಚ್ಚಿದ ಕಾರ್ಯಕ್ರಮವನ್ನು ಸುಸಜ್ಜಿತವಾಗಿ ನಿರ್ವಹಿಸಿದರು. ಮತ್ತು ಹಳೆ ವಿದ್ಯಾರ್ಥಿ ವೈಷ್ಣವಿ ಹೈಕಾಡಿ ಉಪಸ್ಥಿತರಿದ್ದರು. ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.