ಕುಂದಾಪುರ (ನ, 01): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಹಾಗೂ ಶಿಕ್ಷಕ ಸತೀಶ್ ವಡ್ಡರ್ಸೆ ಕುಂದಾಪುರದಲ್ಲಿ ಭೂಮಿಯೊಂದಿಗೆ ಬೆಸೆದುಕೊಂಡ ಈ ದೀಪಾವಳಿ ಕೃಷಿ ಸಂಬoಧಿಯಾಗಿ ಬೆಳೆದು ಬಂದಿದ್ದು. ಹೀಗಾಗಿ ನರಕ ಚತುರ್ದಶಿ, ಬಲಿ ಪೂಜೆ ಮತ್ತು ಗೋಪೂಜೆಗಳು ಹೊಸ ಸಂಬoಧಿ ಆಚರಣೆಗಳೇ ಇವುಗಳು ಇಲ್ಲಿನ ಅಸ್ಮಿತೆ ಹೀಗಾಗಿ ಈ ಆಚರಣೆಗಳು ಇಂದಿನ ಯುವ ಜನತೆಗೆ ತಿಳಿಯುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ದೀಪಾವಳಿ ಆಚರಣೆಯ ಹಿನ್ನೆಲೆಯನ್ನು ತಿಳಿಸಿ ಶುಭ ಹಾರೈಸಿದರು. ಉಪ-ಪ್ರಾಂಶುಪಾಲ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ರೇಷ್ಮಾ ಶೆಟ್ಟಿ ವಂದಿಸಿ, ಶ್ರೀಮತಿ ಪ್ರವೀಣಾ ಎಮ್. ಪೂಜಾರಿ ನಿರೂಪಿಸಿದರು. ವಿದ್ಯಾರ್ಥಿನಿ ಕೀರ್ತಿ ಕೆ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಗೋಪೂಜೆ, ಲಕ್ಷ್ಮಿ ಪೂಜೆ ವಾಹನ ಪೂಜೆಯನ್ನು ನೆರವೇರಿಸಿ, ಬಲಿಂದ್ರ ಪೂಜೆ ಮಾಡಿದರು. ಗಣಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ ಗಿರಿರಾಜ್ ಭಟ್ ಪೂಜಾ ವಿಧಿ ನೆರವೇರಿಸಿದರು. ಕಚೇರಿ ಸಿಬ್ಬಂದಿಗಳಾದ ಸುಧೀಂದ್ರ ಕೆ.ಎಸ್. ಬಲೀಂದ್ರನ ಸೊಲ್ಲನ್ನು ಹಾಡಿದರು. ಗೀತ ಗಾಯನ ತಂಡದಲ್ಲಿ ಹಾಡುಗಾರಿಕೆಯ ಮುಖೇನ ಸಂಭ್ರಮದ ದೀಪಾವಳಿ ಆಚರಿಸಲಾಯಿತು.