ಕೋಟೇಶ್ವರ : ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ಬೀಜಾಡಿ ಯಲ್ಲಿ ನಡೆದ 40 ಗಜಗಳ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ- ಅವೀಘ್ನ ಸ್ರಷ್ಠಿ ಟ್ರೋಫಿ- 2021, ಕುಂದಾಪುರದ 4 ಬಲಿಷ್ಠ ತಂಡಗಳ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 6ರ ಶನಿವಾರ ಉದ್ಘಾಟನೆಗೊಂಡಿತು.
ಶ್ರೀ ಚಿಕ್ಕು ಅಮ್ಮ ದೈವಸ್ಥಾನ ಗೋಪಾಡಿ ಇದರ ಅನುವಂಶಿಕ ಮುಕ್ತೇಸರರಾದ ಶ್ರೀ ಆನಂದ ಬಿಳಿಯರ್ ಕ್ರಿಕೆಟ್ ಪಂದ್ಯ ಕೂಟವನ್ನು ಉದ್ಘಾಟಿಸಿದರು. ಉದ್ಯಮಿಗಳಾದ ಸುರೇಶ್ ಬೆಟ್ಟಿನ್ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು .ಸಭೆಯಲ್ಲಿ ಶ್ರೀಲತಾ ಸುರೇಶ್ ಶೆಟ್ಟಿ , ಸುಭಾಷ್ ಕಾಂಚನ್ ಸುರೇಂದ್ರ ಮಾರ್ಕೊಡು, ಶ್ರೀನಿವಾಸ ಕುಂದರ್ ಮಂಜುನಾಥ ಕುಂದರ್, ಪ್ರಕಾಶ್, ಸದಾಶಿವ ಗವರೋಜಿ, ರಾಮಕೃಷ್ಣ ಆಚಾರ್ಯಹಾಗೂ ಯೋಧ ಶ್ರೀ ಅನುಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಅವಿಘ್ನ ಸೃಷ್ಟಿ ಚಾಲೆಂಜ್ ಟ್ರೋಫಿಯನ್ನು ಫ್ರೆಂಡ್ಸ್ ಗಿಳಿಯಾರು ತಂಡವನ್ನು ಸೋಲಿಸುವ ಮೂಲಕ ಅಜೇಯ ಕುಂಜಿಗುಡಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಜಯಿಸಿತು. ಅವಿಘ್ನ ಸೃಷ್ಟಿ ಟ್ರೋಫಿ -2021ನ್ನು ಅನುವಂಶಿ ಗೋಪಾಡಿ ತಂಡವನ್ನು SNF ಹೆಗ್ಗುರು ಬೆಟ್ಟು ಸೋಲಿಸುವುದರ ಮೂಲಕ ತನ್ನದಾಗಿಸಿಕೊಂಡಿತು.
ಈ ಸಂದರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಸಂಸ್ಥಾಪಕರಾದ ಪ್ರದೀಪ ಮೊಗವೀರ, ಕ್ರಿಕೆಟ್ ನಿರೂಪಕರಾದ ಪ್ರದೀಪ ಆಚಾರ್, ಚಾಲೆಂಜ್ ಕ್ರಿಕೆಟ್ ಕ್ಲಬ್ ಮುಖ್ಯಸ್ಥರಾದ ಚಂದ್ರಪೂಜಾರಿ, ಜಾನ್ಸನ್ ಕ್ರಿಕೆಟ್ ಕ್ಲಬ್ ನ ಮುಖ್ಯಸ್ಥರಾದ ರವಿ ಹೆಗ್ಡೆ ಹಾಗೂ ಕಂಬಳ ಓಟದಲ್ಲಿ ಸಾಧನೆಗೈದ ರಾಘವೇಂದ್ರ ಮೊಗವೀರ ಗಿಳಿಯಾರ್ ರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರವೀಂದ್ರ ತೋಳಾರ್ ವಹಿಸಿದ್ದರು. ಮಂಜುನಾಥ ಕುಂದರ್, ಶುಭಾಷ್ ಕಾಂಚನ್ ,ಅನುಪ ಪೂಜಾರಿ ಪ್ರಕಾಶ್, ಗೆಳೆಯರ ಬಳಗದ ಅಶೋಕ ಪೂಜಾರಿ, ನರಸಿಂಹ , ಕ್ರಷ್ಣ, ಗಣೇಶ ಕಾಂಚನ್ ಹಾಗೂ M Sports Club ಇದರ ಮಾಲಕರಾದ ಸಚಿನ್ ಮಹದೇವನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರಾದ ಆದರ್ಶ ಗೌಡ ರನ್ನು ಸನ್ಮಾನಿಸಲಾಯಿತು. ಪಂದ್ಯಾಟದಲ್ಲಿ ಸಂಗ್ರಹಿಸಿದ ಹಣವನ್ನು ಅಶಕ್ತರಿಗೆ ಸಹಾಯ ಹಸ್ತ ನೀಡುವ ನೀಡುವ ಸದುದ್ದೇಶದಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕ್ರಿಕೆಟ್ ಪಂದ್ಯಾಕೂಟವನ್ನು ಸ್ಥಳೀಯ ಟಿವಿ ಮಾಧ್ಯಮದಲ್ಲಿ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಲಾಯಿತು.