ಹೆಮ್ಮಾಡಿ( ಡಿ.19): ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇದರ ಪ್ರಾಂಶುಪಾಲರು ಹಾಗೂ ವಿಯೆಟ್ನಾಂ ಅಂತರಾಷ್ಟ್ರೀಯ ಬೆಸ್ಟ್ ಐಕಾನ್ ಅವಾರ್ಡ್ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಣೇಶ ಮೊಗವೀರರನ್ನು ವೆಲಾಸಿಟಿ ಅಕಾಡೆಮಿ ಇಂಡಿಯಾ ಕರಾಟೆ ತರಭೇತಿ ಸಂಸ್ಥೆಯ ಮುಖ್ಯಸ್ಥರಾದ ಅಕ್ಷಯ್ ಹೆಮ್ಮಾಡಿಯವರು ತಮ್ಮ ಸಂಸ್ಥೆಯ ವತಿಯಿಂದ ಡಿಸೆಂಬರ್ 15 ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗೀಶ್ ಗುಡ್ರಿ ವಹಿಸಿಕೊಂಡರು. ಕಾರ್ಯಕ್ರಮದ ಪ್ರಾರಂಭದಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಹಲವಾರು ಪ್ರಶಸ್ತಿ ಪುರಸ್ಕಾರವನ್ನು ಮುಡಿಗೇರಿಸಿಕೊಂಡಂತಹ ಕೊಳಲುವಾದಕರಾದ ಮಾಸ್ಟರ್ ಶ್ಯಾಮ್ ಇವರಿಂದ ಕೊಳಲುವಾದನ ನಡೆಯಿತು.
ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ರತರು) ಶ್ರೀ ಉದಯ್ ಕುಮಾರ್ ಹಟ್ಟಿಯಂಗಡಿ ,ಶ್ರೀ ನಾಗರಾಜ್ ಪುತ್ರನ್, ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಶ್ರೀ ಸುರೇಂದ್ರ ಶೆಟ್ಟಿ ಇವರು ಉಪಸ್ಥಿತರಿದ್ದರು. ಕುಮಾರಿ ಶಿವಾನಿಯ ಕಾರ್ಯಕ್ರಮ ನಿರೂಪಿಸಿದರು .