ಕುಂದಾಪುರ(ಆ,21):ಸಮುದಾಯ ಮುಂಚಲನೆಯ ಸಾಂವಿಧಾನಿಕ ಪ್ರಜ್ಞೆ – ವಿಶೇಷ ಉಪನ್ಯಾಸ ಕಾರ್ಯಕ್ರಮಡಾ. ದೇವರಾಜು ಅರಸು ರವರ ಜನ್ಮದಿನಾಚರಣೆ ಪ್ರಯುಕ್ತ ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಸಹಯೋಗದೊಂದಿಗೆ ಸಮುದಾಯ ಮುಂಚಲನೆಯ ಸಾಂವಿಧಾನಿಕ ಪ್ರಜ್ಞೆ – ವಿಶೇಷ ಉಪನ್ಯಾಸ ಕಾರ್ಯಕ್ರಮವು ಆಗಸ್ಟ್ 20 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ದಿನೇಶ್ ಹೆಗ್ಡೆ- ನಿವೃತ್ತ ಪ್ರಾಂಶುಪಾಲರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲರಾದ ಪ್ರೋ. ದೋಮ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಳಾವರ ಶ್ರೀ ಉದಯ ಕುಮಾರ ಶೆಟ್ಟಿ – ಕನ್ನಡ ಉಪನ್ಯಾಸಕರು ಸ.ಪ.ಪೂ ಕಾಲೇಜು ಕುಂದಾಪುರ ಸ್ವಾಗತಿಸಿದರು. ಶ್ರೀ ನಾಗರಾಜ – ಕನ್ನಡ ಉಪನ್ಯಾಸಕರು ಕಾರ್ಯಕ್ರಮ ನಿರ್ವಹಿಸಿ, ಶ್ರೀ ಶಂಕರ ನಾಯ್ಕ – ಕನ್ನಡ ಉಪನ್ಯಾಸಕರು ವಂದಿಸಿದರು. ಚಕೋರ ಸಾಹಿತ್ಯ ವೇದಿಕೆಯ ರಾಮಾಂಜಿ ವಿಜಯಾ ದಬ್ಬೆಯವರು ಕೃಷ್ಣ ಸಾಸ್ತಾನ ಗೀತ ಗಾಯನ ನಡೆಸಿದರು.











