ಹೆಮ್ಮಾಡಿ (ಆ. 10): ಇಲ್ಲಿನ ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಬೇಬಿ.ಜಿ.ನಾಯ್ಕ ಕಟ್ಟು ಹೆಮ್ಮಾಡಿ ಹಾಗೂ ಕಾರ್ಯದರ್ಶಿಯಾಗಿ . ಸುಮಾ.ಡಿ. ಮೊಗವೀರ ಬಗ್ವಾಡಿ ಆಯ್ಕೆ ಯಾಗಿದ್ದಾರೆ.



ಇವರಿಗೆ ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ಯಾಮಲಾ ಜಿ. ಚಂದನ್ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಬಿ ಕಾಂಚನ್. ಹಾಗೂ ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಇದರ ಸದಸ್ಯರು ಉಪಸ್ಥಿತರಿದ್ದರು.











