ಗೋಪಾಡಿ(ಜ.11): ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ(ಹೆಣ್ಣು ದೈವದ ಮನೆ ) ಹಾಗೂ ಪರಿವಾರ ದೈವಸ್ಥಾನದ 12ನೇ ವರ್ಷದ ವರ್ಧಂತ್ಯುತ್ಸವ ಜನವರಿ 25ರ ಆದಿತ್ಯವಾರ ಹಾಗೂ 26 ರ ಸೋಮವಾರದಂದು ನಡೆಯಲಿದೆ.

ತಾ. 25-01-2026ನೇ ಆದಿತ್ಯವಾರ ಸಂಜೆ ಗಂಟೆ 4.00ಕ್ಕೆ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಗೋಪಾಡಿ (ಪಡು) ಇವರಿಂದ ಶ್ರೀ ಮಲಸಾವರಿ ಅಮ್ಮನವರಿಗೆ ಬೆಳ್ಳಿ ಮುಖವಾಡವನ್ನು ಶ್ರೀ ಚಿಕ್ಕು ಅಮ್ಮ ದೈವಸ್ಥಾನದಿಂದ ಪುರಮೆರವಣಿಗೆಯಲ್ಲಿ ಸಾಗಿ ಸಮರ್ಪಿಸಲಾಗುತ್ತದೆ.


ತಾ. 26-01-2026 ರ ಬೆಳಿಗ್ಗೆ ಹಣ್ಣುಕಾಯಿ ಸೇವೆ, ಪ್ರಸಾದ ವಿತರಣೆ ಹಾಗೂ ಸವಿನಯ ಚಂಡೆ ಬಳಗ ಗೋಪಾಡಿ (ಪಡು) ಇವರಿಂದ ಚಂಡೆ ಸೇವೆ ಮತ್ತು ಬೆಳಿಗ್ಗೆ ಗ 11:00ಕ್ಕೆ ಶ್ರೀರಾಮ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ,ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಕೋಟ ವೇದಮೂರ್ತಿ ಶ್ರೀಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.











