ಕುಂದಾಪುರ (ಜ. 26):ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ. ಲಿ ಆಯೋಜಿಸಿದ್ದ 21ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆ ಜನವರಿ 25 ರಂದು ತಮಿಳುನಾಡಿನ ಪುದುಚೇರಿಯಲ್ಲಿ ರಂದು ನಡೆಯಿತು. ರಾಷ್ಟ್ರದ ವಿವಿಧ ಭಾಗಗಳಿಂದ 2200 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ಕುಂದಾಪುರ ಸೆಂಟರ್ ನ 85 ವಿದ್ಯಾರ್ಥಿಗಳಲ್ಲಿ ಕುಂದಾಪುರದ ವಿ. ಕೆ. ಆರ್. ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ8 ನೇ ತರಗತಿಯ ವಿದ್ಯಾರ್ಥಿ ನಿವೇನ್ ಲೂವಿಸ್ A/K 3 ಲೆವೆಲ್ ಓಪನ್ ಕೆಟಗರಿನಲ್ಲಿ 5 ನೇ ಸ್ಥಾನ ಪಡೆದಿದ್ದಾರೆ.

ಇವರಿಗೆ ಕುಂದಾಪುರ ಸೆಂಟರ್ ನ ಶ್ರೀ ಪ್ರಸನ್ನ, ಶ್ರೀಮತಿ ಮಹಾಲಕ್ಷ್ಮಿ ಹಾಗೂ ದೀಪಾ ಶಿಕ್ಷಕರು ತರಬೇತಿ ನೀಡಿರುತ್ತಾರೆ. ಇವರು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅವಿತಾ ಕೊರೆಯಾ ಇವರ ಪುತ್ರ.










