ಕುಂದಾಪುರ(ಜು,10): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ರೈನಿ ಡೇ ಯನ್ನು ಜುಲೈ, 07 ರಂದು ಆಚರಿಸಲಾಯಿತು.

ಬಣ್ಣದ ಛತ್ರಿ ಮತ್ತು ರೇನ್ ಕೋಟ್ ಧರಿಸಿದ ನಮ್ಮ ಪುಟ್ಟ ಮಕ್ಕಳು ತೊಯ್ದ ಅಂಗಳದಲ್ಲಿ ಮಳೆ ದಿನವನ್ನು ಸಂಭ್ರಮದಿಂದ ಆಚರಿಸಿದರು. ಮಳೆ ಹಾಡು, ಕಾಗದ ದೋಣಿ, ಆಟಗಳ ಮೂಲಕ ಮಕ್ಕಳು ಖುಷಿಯಿಂದ ಕುಣಿದಾಡಿದರು ಮತ್ತು ಮಳೆಯ ಮಹತ್ವವನ್ನು ಕಲಿತರು.











