ಗಂಗೊಳ್ಳಿ( ಆ ,26) : ಇಂದಿನ ಸ್ಪರ್ಧಾತ್ಮಕ ಮತ್ತು ಬದಲಾಗುತ್ತಿರುವ ಯುಗದಲ್ಲಿ ಉದ್ಯೋಗವನ್ನು ಪಡೆಯಲು ನಮ್ಮ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಹೊಸ ರೀತಿಯ ಕೌಶಲ್ಯದೊಂದಿಗೆ ಬಳಸಿಕೊಳ್ಳುವ ಕಲೆಯನ್ನು ನಾವು ಸಿದ್ದಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಅರ್ಚನಾ ದೇವಾಡಿಗ ಅಭಿಪ್ರಾಯಪಟ್ಟರು.

ಅವರು ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆರಂಭಗೊಂಡ ಸೈನ್ಸ್ ಕ್ಲಬ್ ನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು ಜಿ.ಎಸ್ ವಿ.ಎಸ್ ಅಸೋಸಿಯನ್ ಅಧ್ಯಕ್ಷ ಡಾ. ಕಾಶಿನಾಥ ಪಿ. ಪೈ ಶುಭ ಹಾರೈಸಿದರು.
ಪೂರ್ವಿಕ ಎಂ. ಜಿ ಪ್ರಾಸ್ತಾವಿಕ ಮಾತುಗಳನ್ನಾ ಡಿದರು. ಉಪನ್ಯಾಸಕಿ ಪವಿತ್ರಾ ಮತ್ತು ವಿದ್ಯಾರ್ಥಿ ಪ್ರತಿನಿಧಿ ಚೇತನ್ ಉಪಸ್ಥಿತರಿದ್ದರು. ಅಂಕುಶ್ ಸ್ವಾಗತಿಸಿದರು. ಶರಣ್ಯ ತನಿಷಾ ಮತ್ತು ಅಂಕಿತ ಪ್ರಾರ್ಥಿಸಿದರು. ತ್ರಿಷಾ ಅತಿಥಿಗಳನ್ನು ಪರಿಚಯಿಸಿದರು. ಮನಿಷಾ ನಿರೂಪಿಸಿದರು ದೀಪಿಕಾ ಧನ್ಯವಾದ ಅರ್ಪಿಸಿದರು.











