ಗಂಗೊಳ್ಳಿ(ಆ,20): ಗಂಗೊಳ್ಳಿಯ ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ 2ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಅಯಾನ್, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ.

ಅಂಜುಮನ್ ನೂರುಲ್ ಇಸ್ಲಾಂ (ರಿ.), ಗಂಗೊಳ್ಳಿ ಸಂಸ್ಥೆಯ ನಿರ್ವಹಣೆಯಲ್ಲಿರುವ ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಪ್ರತಿಭಾವಂತ ವಿದ್ಯಾರ್ಥಿ ಮುಹಮ್ಮದ್ ಅಯಾನ್, 3ನೇ Invitational National Level Karate Championship – COMPETE 5.0ರಲ್ಲಿ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
2026ರ ಆಗಸ್ಟ್ 16ರಂದು ಕಟಪಾಡಿಯ ಕುಂಕಲ್, ಸುಭಾಷ್ ನಗರದಲ್ಲಿರುವ Thunder’s Grand Bayನಲ್ಲಿ ನಡೆದ ಈ ರಾಷ್ಟ್ರಮಟ್ಟದ ಚಾಂಪಿಯನ್ಶಿಪ್ನಲ್ಲಿ ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಪ್ರತಿಭಾವಂತ ಕ್ರೀಡಾಪಟುಗಳ ನಡುವೆ ಅಯಾನ್ ತಮ್ಮ ಅದ್ಭುತ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿ ಬೆಳ್ಳಿ ಪದಕಕ್ಕೆ ಪಾತ್ರರಾಗಿದ್ದಾರೆ.
ಅಯಾನ್ ಅವರು Team KDF Kandlur Dojoನಲ್ಲಿ Sensei ಸಿಹಾನ್ ಶೇಖ್ ಬಸ್ರೂರ್ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ಇರುವ ನಿರಂತರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವ ಶ್ಲಾಘನೀಯವಾಗಿದೆ.

ಈ ಅಪೂರ್ವ ಸಾಧನೆಗಾಗಿ ಅಯಾನ್ ಅವರ ಪೋಷಕರಾದ ಮುಹಮ್ಮದ್ ಅಸಿಫ್ ಮತ್ತು ಮಿಶ್ರಿಯಾ, ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಹಪಾಠಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಂಗೊಳ್ಳಿಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಮುಹಮ್ಮದ್ ಅಯಾನ್ ಅವರಿಗೆ ಸಂಸ್ಥೆ ಅಭಿನಂದನೆ ಕೋರಿದೆ.










