ಹೆಮ್ಮಾಡಿ(ಸೆ. 05): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇವರ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.),ಅಂಬಲಪಾಡಿ,ಉಡುಪಿ ಇವರ ಸಹಯೋಗದೊಂದಿಗೆ ಶಿಕ್ಷಕ ದಿನಾಚರಣೆ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಇದರ ಶಿಕ್ಷಕರಾದ ಶ್ರೀಮತಿ ಶಾರದಾರವರನ್ನು ಸೆಪ್ಟೆಂಬರ್ 05 ರಂದು ಹೆಮ್ಮಾಡಿಯ ಅವರ ಸ್ವಗ್ರಹಕ್ಕೆ ತೆರಳಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ,ಗೌರವಾಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ , ಕಾರ್ಯದರ್ಶಿ ಜಯಂತ್ ಕುಂದರ್ , ಕೋಶಾಧಿಕಾರಿ ಸಂತೋಷ ಮೊಗವೀರ ಸೂಳ್ಸೆ, ಉಪಾಧ್ಯಕ್ಷರಾದ ಆನಂದ್ ಮೊಗವೀರ ಕಟ್ಟು, ವಿಜಯ್ ಕಾಂಚನ್, ಶ್ಯಾಮಲಾ ಜಿ. ಚಂದನ್,ಜೊತೆ ಕಾರ್ಯದರ್ಶಿ ಮಹೇಶ್ ನೆಂಪು ಜನಾರ್ಧನ ಮೊಗವೀರ ತೊಪ್ಪಲು, ಸಲಹೆಗಾರರಾದ ಗೋಪಾಲ್ ಚಂದನ್, ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷರಾದ ಬೇಬಿ ಜಿ.ನಾಯ್ಕ ಹಾಗೂ ಸದಸ್ಯರು ಹಾಗೂ ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶೋಭಾ.ಜಿ ಪುತ್ರನ್ ಉಪಸ್ಥಿತರಿದ್ದರು.

ಘಟಕದ ಉಪಾಧ್ಯಕ್ಷರಾದ ಲೋಹಿತಾಶ್ವ ಆರ್. ಕುಂದರ್ ನಿರೂಪಿಸಿದರು. ಸಂಘಟನೆಯ ಸದಸ್ಯರು,ಶಿಕ್ಷಕಿಯ ಮನೆಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.











