ಕುಂದಾಪುರ (ಫೆ:17 ) ಪ್ರಥಮ ವರ್ಷದ ಎಂ.ಬಿ.ಎ ವಿಧ್ಯಾರ್ಥಿಗಳಿಗೆ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಪಂಚಾಯತ್ ಗೆ ಎಂ.ಬಿ.ಎ ವಿಧ್ಯಾರ್ಥಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಕೋಟ ಗ್ರಾಮ ಪಂಚಾಯತ್ ಪಿ.ಡಿ.ಒ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ವಿಧ್ಯಾರ್ಥಿಗಳು ತಮ್ಮ ವಿಧ್ಯಾರ್ಥಿ ಜೀವನದಲ್ಲೇ ಸಮಾಜಕ್ಕೆ ತಮ್ಮಿಂದಾದ ಸೇವೆಯನ್ನು ಸಲ್ಲಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಎಂ.ಬಿ.ಎ. ಆದ ವಿಧ್ಯಾರ್ಥಿಗಳು ಗ್ರಾಮಾಭಿವೃದ್ದಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ನ ವಿಶೇಷ ಕರ್ತವ್ಯ ಅಧಿಕಾರಿ ಶ್ರೀಮತಿ ಪೂರ್ಣಿಮಾ, ವಿಭಾಗದ ಮುಖ್ಯಸ್ಥೆ ಹಾಗೂ ಡೀನ್ ಡಾ| ಪ್ರತಿಭಾ ಪಾಟೀಲ್, ಸಹಾಯಕ ಪ್ರಾಧ್ಯಾಪಕಿ ಅಮೃತಮಾಲ, ಸಹಾಯಕ ಪ್ರಾಧ್ಯಾಪಕಿ ಕಾವ್ಯ ಉಪಸ್ಥಿತರಿದ್ದರು.










