ಕುಂದಾಪುರ:(ಫೆ17) ಸಿಂಗಲ್ ಮಿಂಗಲ್ ಇದು ಕುಂದಾಪುರ ಭಾಗದ ಯುವಕರು ಸೇರಿ ರಚಿಸಿದ ಕನ್ನಡ ಕಾಮಿಡಿ ಕಿರುಚಿತ್ರ . ಪ್ರೇಮಿಗಳ ದಿನದಂದು ಪ್ರೇಮಿಗಳಿಬ್ಬರು ಭೇಟಿಯಾಗುವ ಸಂಧರ್ಭದಲ್ಲಿ ಪೇಚಿಗೆ ಸಿಲುಕುವ ಸನ್ನಿವೇಶದ ಕಥೆ ಆಧಾರಿತ ಈ ಕಿರುಚಿತ್ರ ಪಾತ್ರವರ್ಗದಲ್ಲಿ ಕುಂದಾಪುರ ಕೋಡಿಯ ಸೃಜನ್ ಪೂಜಾರಿಯವರು (ವಿಕ್ಕಿ) ಚಿತ್ರದ ನಾಯಕ ಪಾತ್ರವನ್ನು, ಹಳವಳ್ಳಿಯ ಸುಪ್ರಭಾ ಪಿ. ರವರು (ಪಲ್ಲವಿ) ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಗಂಗೊಳ್ಳಿಯ ಶ್ರೀಕಾಂತ್ ಬಿಲ್ಲವ ಸೈಕೊ ಪಾತ್ರವನ್ನು ಹಾಗೂ ನಾಗರಾಜ್ ನಾಯಕ್ ಸ್ನೇಹಿತನ ಪಾತ್ರವನ್ನು, ಕುಂದಾಪುರದ ಅಂಕಿತ್ ಸಾರಂಗ್ ಮೆಕಾನಿಕ್ ಪಾತ್ರ ನಿರ್ವಹಿಸಿದ್ದಾರೆ.
ಈ ಕಿರುಚಿತ್ರವನ್ನು ಗಂಗೊಳ್ಳಿಯ ಎನ್.ಎಮ್. ನಿಖಿಲ್’ರವರು ಕಥೆ ರಚಿಸಿ, ನಿರ್ದೇಶಿಸಿ, ಸಂಕಲನ ಮಾಡಿದ್ದಾರೆ. ಕುಂದಾಪುರದ ಅಕ್ಷಯ್ ಸಾರಂಗ್’ರವರು ಛಾಯಾಗ್ರಹಣ, ಗಂಗೊಳ್ಳಿಯ ಮಣಿಕಂಠ ಖಾರ್ವಿಯವರು ಪ್ರೊಡಕ್ಷನ್ ಡಿಸೈನ್ ಮಾಡಿದ್ದಾರೆ. ಶಿರೂರು ಮೂಲದ ಗೋಪಾಲ್ ಹಾಗೂ ಸಿದ್ಧಾಪುರ ಮೂಡುಬಗೆಯ ನಮನ ಅಶೋಕ್ ಪ್ರಚಾರ ನಿರ್ವಹಣೆಯನ್ನು ಮಾಡಿದ್ದಾರೆ.
ಪತಂಗ ಫಿಲ್ಮ್ಸ್ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಕಿರುಚಿತ್ರದ ವೀಕ್ಷಣೆಗೆ ಅವಕಾಶ ಕಲ್ಪಿಸಿರುತ್ತಾರೆ.













