ಉಡುಪಿ (ಫೆ – 19) : ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಫೆ. 22ರಂದು ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ಗೆ ಕರೆ ನೀಡಿದ್ದು, ನಾಗರೀಕರು ಹಾಗೂ ಸ್ಥಳೀಯ ಹಲವಾರು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

ಕೋಟ ಭಾಗದಲ್ಲಿ ಬಂದ್ ಕುರಿತಾದ ಪೂರ್ವ ತಯಾರಿ ನಡೆಸುವ ಸಲುವಾಗಿ ಫೆ. 19ರಂದು ಸಂಜೆ 5.30ಕ್ಕೆ ಕೋಟ ಮಾಂಗಲ್ಯ ಮಂದಿರದಲ್ಲಿ ಸಭೆ ಕರೆಯಲಾಗಿದ್ದು,ಹಲವಾರು ವಿಚಾರಗಳನ್ನು ಚರ್ಚಿಸಲಿದ್ದಾರೆ.
ವಾಹನ ತೆರಿಗೆ, ರಸ್ತೆ ತೆರಿಗೆಗಳಿಂದ ಹೈರಾಣಾದ ಸ್ಥಳೀಯ ಜನತೆ ಟೋಲ್ ಪ್ಲಾಜಾದಲ್ಲಿ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಈ ಪ್ರತಿಭಟನೆಗೆ ಸಜ್ಜಾಗಿದೆ










