ಮಧುವನ (ಮಾ.4) : ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವ್ಯಕ್ತಿತ್ವ ವಿಕಸನ ಗೊಳಿಸಿಕೊಳ್ಳ ಬೇಕು ಎಂದು ಇ. ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದ ನಿರ್ದೇಶಕರಾದ ಶ್ರೀಮತಿ ಮಹಿಮಾ ಮಧು ಹೇಳಿದರು.
ಅವರು ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ ಆಕಾಶ್ ಸವಳಸಂಗ್ ಇವರ ಅಧ್ಯಕ್ಷತೆಯಲ್ಲಿ ಆಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ನಡೆದ ಅಂತರ್ ಕಾಲೇಜು ಮಟ್ಟದ “ಕ್ಯಾನ್ಸರ್ ಕಾರಣ ಮತ್ತು ತಡೆಗಟ್ಟುವಿಕೆ” ಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಕುಮಾರಿ ಅನುಶ್ರೀ ಸರಕಾರಿ ವೈದ್ಯಕೀಯ ಕಾಲೇಜು ಕೊಡಗು ಪ್ರಥಮ, ರೋಜಾ ಪೂಜಾರಿ ಆರ್ .ಎನ್ ಎಸ್. ಪಿ.ಯು ಕಾಲೇಜು ಕುಂದಾಪುರ ದ್ವಿತೀಯ, ಕುಮಾರಿ ವಿಜೇತಾ ಇ. ಸಿ .ಆರ್. ಕಾಲೇಜು ಮಧುವನ ಇವರಿಗೆ ನಗದು ಬಹುಮಾನ ವಿತರಿಸಿದರು.
ಹಾಗೆಯೇ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು (ಪಿ.ಯು) ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಪೂರ್ಣಪ್ರಜ್ಞಾ ಪಿ.ಯು. ಕಾಲೇಜು ಆದಮಾರು ಉಡುಪಿಯ ವಿದ್ಯಾರ್ಥಿಗಳಾದ ರಾಹುಲ್ ಎಂ. ಅಕ್ಷಯ್ ಕೆ. ಎ. ಆರ್ ಪ್ರಥಮ. ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ನಂದನ್ ಆರ್ ಪೈ, ಅತೀ ಹೆಬ್ಬಾರ್ ದ್ವಿತೀಯ ಹಾಗೂ ಮನೀಶ್ ಹೆಬ್ಬಾರ್, ತನ್ನಯ್ ತೃತೀಯ ಇವರುಗಳಿಗೆ ನಗದು ಬಹುಮಾನವನ್ನು ವಿತರಿಸಿದರು.
ಏವಿಯೇಷನ್ ವಿಭಾಗ ಮುಖ್ಯಸ್ಥರಾದ ಶ್ರೀ ಮಿರ್ ತಾಜ್ ದಾರ್ ಹುಸೇನ್ ಉಪಪ್ರಾಂಶುಪಾಲರಾದ ಶ್ರೀಮತಿ ಚಂದ್ರಕಲಾ ಎಸ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.