ವಂಡ್ಸೆ (ಮಾ.5): ಸುಮಾರು 19ವರ್ಷಗಳಿಂದ ಕ್ರೀಡಾ ಪಟುಗಳಿಗೆ, ಉತ್ತಮ ಕೃಷಿಕರಿಗೆ,ಸಮಾಜ ಸೇವಕರಿಗೆ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವಿಸುವ ಕಾರ್ಯಕ್ರಮವನ್ನು ನೆಡೆಸಿಕೊಂಡು ಬಂದಿರುವ ಮಹಾವಿಷ್ಣು ಯುವಕ ಮಂಡಲವು ಉತ್ತಮ ಕಾರ್ಯವನ್ನು ಮಾಡುತ್ತಿದ್ದು ತುಂಬಾ ಸಂತೋಷದ ವಿಚಾರ ಇವತ್ತು ಕೂಡ ಯಕ್ಷಗಾನ ಕಲೆಗೆ ಪ್ರೋತ್ಸಹಿಸುತ್ತಿರುವುದು ತುಂಬಾ ಸಂತೋಷಕರ ಎಂದು ಶ್ರೀ ಶನೇಶ್ವರ ದೇವಸ್ಥಾನ ಚೋನೆಮನೆ ಅಜ್ರಿ ಇದರ ಆಡಳಿತ ಧರ್ಮದರ್ಶಿಗಳಾದ ಶ್ರೀ ಅಶೋಕ್ ಶೆಟ್ಟಿ ಯವರು ಸಮಾರಂಭದಲ್ಲಿ ಹೇಳಿದರು.
ಅವರು ಮಹಾವಿಷ್ಣು ಯುವಕ ಮಂಡಲ ಕಟ್ ಬ್ಯಾಲ್ತೂರ್ ಹಾಗೂ ಮಾನಸ ಯುವತಿ ಮಂಡಲ ಹಾಗೂ ಊರಿನವರ ಸಹಕಾರದೊಂದಿಗೆ ಕಲಪ್ರತಿಭೆ ಗಳಿಗೆ ಗೌರವಿಸುವ ಸಲುವಾಗಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ಆಚಾರ್ ವಹಿಸಿಕೊಂಡು ಶುಭ ಹಾರೈಸಿದರು.
ಸ್ಥಳೀಯ ಕಲಾ ಪ್ರತಿಭೆಗಳಾದ ಅಭಿಷೇಕ್ ಗಾಣಿಗ, ಅರ್ಜುನ್ ಗಾಣಿಗ ಹಾಗೂ ಮೇಳದ ಹಿರಿಯ ಕಲಾವಿದರದ ರಾಘವೇಂದ್ರ ಶೆಟ್ಟಿ ಬಡಾಬಾಳು ಇವರನ್ನ ವೇದಿಕೆಯಲ್ಲಿ ಗೌರವಿಸಲಾಯಿತು, ಸಮಾರಂಭ ದಲ್ಲಿ ಯುವಕ ಮಂಡಲದ ಗೌರವ ಅಧ್ಯಕ್ಷರಾದ ರಾಘವೇಂದ್ರ ನಾವಡ,ಸ್ಥಳೀಯರಾದ ಸೀತಾರಾಮ್ ಆಚಾರ್, ಯುವಕ ಮಂಡಲದ ಮಾಜಿ ಅಧ್ಯಕ್ಷ ರಾದ ಬಸವ ಮೊಗವೀರ, ನರಸಿಂಹ ಗಾಣಿಗ, ರಾಮಚಂದ್ರ ಕುಲಾಲ್, ನಾಗರಾಜ್ ಗಾಣಿಗ ಕನ್ಯಾನ, ಯಕ್ಷಭಿಮಾನಿ ರಘುರಾಮ್ ಗಾಣಿಗ ಮಲ್ಲಾರಿ, ರವೀಶ್ ಡಿ. ಎಚ್, ರವರು ಉಪಸ್ಥಿತರಿದ್ದರು.
ಯುವಕ ಮಂಡಲ ಕಾರ್ಯದರ್ಶಿ ಗುರುರಾಜ್ ಗಾಣಿಗ ಸ್ವಾಗತಿಸಿದರು, ಕಿಶೋರ್ ಆಚಾರ್ ಹೆಮ್ಮಾಡಿ ವಂದಿಸಿದರು. ಪ್ರಸಾದ್ ಆಚಾರ್ ಹರೆಗೋಡು ಕಾರ್ಯಕ್ರಮ ನಿರೂಪಿಸಿದರು,