ಉಡುಪಿ (ಮಾ.6) ಶ್ರೀ ಧವಲಾ ಕಾಲೇಜಿನಲ್ಲಿ ವಿಧ್ಯಾರ್ಥಿ ನಾಯಕರಿಗೆ ಒಂದು ದಿನದ ನಾಯಕತ್ವ ತರಬೇತಿ ಶಿಬಿರವು ಮಾರ್ಚ್ 4 ರಂದು ಜರುಗಿತು. ಈ ಶಿಬಿರವನ್ನು ಕಾಲೇಜಿನ ಹಳೆ ವಿಧ್ಯಾರ್ಥಿ ಹಾಗೂ ಶ್ರೀ ನವದುರ್ಗ, ಇಂಡಸ್ಟ್ರೀಸ್ ಸಚ್ಚರಿಪೇಟೆ ಇದರ ಮಾಲಕರಾದ ಶ್ರೀಯುತ ಶ್ರೀಕಾಂತ್ ಕಾಮತ್ರವರು ಉದ್ಘಾಟಿಸಿದರು. ವಿಧ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತಿಳಿದುಕೊಂಡರೆ ಮುಂದೆ ದೇಶದ ನಾಯಕರಾಗುವ ಸೌಭಾಗ್ಯವಂತರಾಗಬಹುದು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಮಾತನಾಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ನಾಯಕತ್ವ ಶಿಬಿರ ತರಬೇತುದಾರರಾದ ಪ್ರೊಫೆಸರ್ (ಮೇಜರ್) ರಾಧಾಕೃಷ್ಣ ಅವರು ಭಾಗವಹಿಸಿ ವಿಧ್ಯಾರ್ಥಿಗಳಿಗೆ ನಾಯಕತ್ವ ವಿಷಯಕ್ಕೆ ಸಂಬಂಧಿಸಿದ್ದ ಪರಿಪೂರ್ಣ ತರಬೇತಿಯನ್ನು ಅತ್ಯಂತ ಸಮರ್ಪಕವಾಗಿ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಸುದರ್ಶನ್ ಕುಮಾರ್ ಅವರು ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ.ರೂಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕರಾದ ಪ್ರಶಾಂತ್ ಸ್ವಾಗತಿಸಿದರು. ಪ್ರೀತಿ ಪ್ರಿನೀಮ್ ಕಾರ್ಯಕ್ರಮ ನಿರೂಪಿಸಿದರು.