ಉಡುಪಿ (ಮಾ. 10) ಉಡುಪಿ ಜಿಲ್ಲೆ, ಮಲ್ಪೆಯ ಬಾಪುತೋಟ ಪಡುಗುಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನದ 25 ನೇ ವರ್ಧಂತ್ಯುತ್ಸವ ಇದೇ ಮಾರ್ಚ್ 11 ರಿಂದ 13 ರ ವರೆಗೆ ನಡೆಯಲಿದೆ. ಮಾರ್ಚ್ 11 ರ ಗುರುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆ, ಸಂಜೆ ರಂಗ ಪೂಜೆ ಹಾಗೂ ರಾತ್ರಿ ಸ್ಥಳೀಯ ಪುಟಾಣಿಗಳಿಂದ ಮನೋರಂಜನೆ ಕಾರ್ಯಕ್ರಮ ಮತ್ತು ಶ್ರೀ ಶಕ್ತಿ ಮಹಿಳಾ ಮಂಡಲದ ಸದಸ್ಯರಿಂದ ‘ದೇಯಿ ಬೈದತಿ ಗೆಜ್ಜೆಗಿರಿ ನಂದನೊಡು ‘ಪೌರಾಣಿಕ ರೂಪಕ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 12 ಶುಕ್ರವಾರ ಬೆಳಿಗ್ಗೆ ಆಶ್ಲೇಷ ಬಲಿ, ಕಲಾಭಿವ್ರದ್ದಿ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ಎನ್ನುವ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಹಾಗೆಯೇ 13ರ ಶನಿವಾರ ಬೆಳಿಗ್ಗೆ ಪುಣ್ಯಾಹ ಬ್ರಹ್ಮ ಕಲಶ ಸ್ಥಾಪನೆ , ಕಲಾಭಿವೃದ್ಧಿಹೋಮ, ಬ್ರಹ್ಮಕಲಶಾಭಿಷೇಕ ಮಹಾಪೂಜೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಶ್ರೀರಾಮ ಮಿತ್ರ ಭಜನಾ ಮಂಡಳಿ ಕಿದಿಯೂರು ಪಡುಕರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೂ ಭಗವದ್ ಭಕ್ತರು ಆಗಮಿಸಿ ಶ್ರೀ ಸರ್ವೇಶ್ವರ ದೇವರ ಕೃಪೆಗೆ ಪಾತ್ರರಾಗಿ, ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.