ಉಡುಪಿ (ಮಾ. 23) ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ಇದರ ಲಲಿತ ಕಲಾ ಸಂಘದ ಆಶ್ರಯದಲ್ಲಿ ಅಧ್ವಾನಪುರ ಎನ್ನುವ ಕನ್ನಡ ನಾಟಕ ಇದೇ ಮಾರ್ಚ್ 26 ರ ಸಂಜೆ 6.30ಕ್ಕೆ ಕಾಲೇಜಿನ ಬಯಲು ರಂಗಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವಿ ಹೆಚ್. ಡುಂಡಿರಾಜ್ ರಚನೆಯ, ವಿಘ್ನೇಶ್ ತೆಕ್ಕಾರು, ವಿನ್ಯಾಸ -ನಿರ್ದೇಶನದ ಈ ನಾಟಕಕ್ಕೆ ರೋಹಿತ್ ಎಸ್. ಬೈಕಾಡಿ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಹಾಗೆಯೇ ರವಿ ಕಾರಂತ್ ಕೋಟ ರಾಗ ಸಂಯೋಜನೆ ಮಾಡಿದ್ದು, ಚೈತ್ರಾ ಕೊಟ್ಯಾನ್
ನೃತ್ಯ ಸಂಯೋಜನೆ ಮಾಡಿರುತ್ತಾರೆ.
ಸಂಗೀತ ಸಾಂಗತ್ಯ ವಿಶ್ವಂಬರ ಆಲ್ಸೆ ಕೌಶಿಕ್ ಸಾಲಿಕೇರಿ, ಸಂದೀಪ್ ಶೆಟ್ಟಿ, ಹರ್ಷಿತಾ, ಪ್ರಜ್ವಲ್ ಮಾರ್ಟಿಸ್, ರಂಗ ಪರಿಕರ-ಪ್ರಸಾದ್ ಬಹ್ಮಾವರ ಹಾಗೂ ರಕ್ಷಿತ್ ಹಾರಾಡಿ, ಪ್ರಸಾದನ-ರಮೇಶ್ ಕಪಿಲೇಶ್ವರ ಸಹಕರಿಸಲಿದ್ದಾರೆ.
ನಟ ವ್ರಂದದಲ್ಲಿ ವೈಶಾಖ್, ಶ್ರೀಷ ಭಂಡಾರಿ, ರಮ್ಯ, ಕಾವ್ಯ, ವರ್ಷಾ, ಆದಿತ್ಯ ಪೈ, ಮಹಮ್ಮದ್ ಅದ್ನಾನ್, ನಾಗರಾಜ್ ಜೆ. ಸುವರ್ಣ, ಶಶಾಂಕ್ ಎಸ್. ತೋನ್ಸೆ, ಸುವಾಗ್. ವಿ .ಮೆಂಡನ್, ಬ್ರಿಜೇಶ್ ಕುಮಾರ್, ಗೌತಮ್, ರಿತೇಶ್ ಪೂಜಾರಿ ಮತ್ತು ಆದಿತ್ಯ ಎನ್ ಗುರುತಿಸಿಕೊಳ್ಳಲಿದ್ದಾರೆ.
ಹಾಗೆಯೇ ಈ ಕಾರ್ಯಕ್ರಮಕ್ಕೆ ಕಾಲೇಜಿನ- ಸಂಚಾಲಕರು, ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ, ಸಿಬ್ಬಂದಿ ವ್ರಂದ ಮತ್ತು ವಿದ್ಯಾರ್ಥಿ ಸಮೂಹ,ಬೆನಕ ಫರ್ನಿಚರ್ಸ್, ಕಲ್ಯಾಣಪುರ -ನವಸುಮ ರಂಗಮಂಚ, ಮೂಡುಬೆಟ್ಟು, ಕೊಡವೂರು – ಟೀಂ ಮಂದಾರ, ಬೈಕಾಡಿ, ಬ್ರಹ್ಮಾವರ ಸಂಪೂರ್ಣ ಸಹಕಾರ ಹಾಗೂ ಸಹಭಾಗಿತ್ವ ನೀಡಲಿದ್ದಾರೆ.