ಕುಂದಾಪುರ (ಮಾ. 22) ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಪೈಯವರು ತಮ್ಮ ಸದಸ್ಯರ ಜೊತೆಗೂಡಿ 65 ವರ್ಷ ಮೇಲ್ಪಟ್ಟ ವಯೋವೃದ್ಧರನ್ನು ಕೋಟೇಶ್ವರ- ಕುಂಭಾಶಿ -ಗೋಪಾಡಿ ಮೂರು ಗ್ರಾಮಗಳಲ್ಲಿ ಕರೋನಾ ಲಸಿಕೆಯನ್ನು ಹಾಕಿಸಲು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












