ಮಧುವನ (ಮಾ, 25 ): ಕರೋನ ಎರಡನೆ ಅಲೆ ನಿಯಂತ್ರಿಸುವಲ್ಲಿ ನಾಗರಿಕರ ಪಾತ್ರ ಹಾಗೂ ಕರ್ತವ್ಯದ ಕುರಿತು ಅರಿವು ಮೂಡಿಸಲು ಇಲ್ಲಿನ ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಮಾರ್ಚ್ 24 ರಂದು “ಕರೋನ ಜನ ಜಾಗೃತಿ ಜಾಥಾ”ವನ್ನು ಕಾಲೇಜಿನ ಸಮೀಪದ ಸೈಬ್ರಕಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ ಸಾವಳಸಂಗ್, ಏವಿಯೇಷನ್ ವಿಭಾಗದ ಮುಖ್ಯಸ್ಥರಾದ ಪ್ರೊ. ತಾಜ್ದಾರ್ ಹುಸೇನ್, ಉಪಪ್ರಾಂಶುಪಾಲರಾದ ಶ್ರೀಮತಿ ಚಂದ್ರಕಲಾ ಎಸ್ ಮಾಸ್ಕ್ ವಿತರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ಎನ್ ಎಸ್ ಎಸ್ ಘಟಕದ ಆಧಿಕಾರಿ ಶ್ರೀ ಅಶೋಕ ಜೋಗಿ, ಸಹ ಸಂಯೋಜಕರಾದ ಕುಮಾರಿ ನಿಧಿ, ಕುಮಾರಿ ಸಮಿತಾ, ರೆಡ್ ಕ್ರಾಸ್ ಘಟಕದ ಆಧಿಕಾರಿ ಕುಮಾರಿ ಶ್ರೀನಿಧಿ ಹೆಗ್ಡೆ, ಸಂಯೋಜಕರಾದ ಶ್ರೀಮತಿ ಕುಸುಮಾವತಿ ಯವರ ನೇತೃತ್ವದಲ್ಲಿ ಉಪನ್ಯಾಸಕರು, ಘಟಕದ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರಿಗೆ ಮಾಸ್ಕ ವಿತರಿಸಿ, ಕರೋನ ಹರಡುವ ಹಾಗೂ ನಿಯಂತ್ರಿಸುವ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಿದರು. ಪ್ರೊ, ಲಿಸಾ ಲಿಯೊ, ಪ್ರೊ. ನಟರಾಜ್ ,. ಡಾ. ಶಾಹಿದಾ ಜಹಾನ್. ಕುಮಾರಿ ಅರ್ಪಿತ, ಶ್ರೀಮತಿ ಸುರೇಖಾ ಉಪಸ್ಥಿತರಿದ್ದರು. ಶ್ರೀ ಅಶೋಕ ಜೋಗಿ ನಿರೂಪಿಸಿದರು