ಕುಂದಾಪುರ (ಏ, 11): ಥಲಸ್ಸೇಮಿಯ ಎನ್ನುವ ಖಾಯಿಲೆಯಿಂದ ಬಳಲುತ್ತಿರುವ ಪಡುಕೋಣೆಯ ರಿಷಿಕ್ ಆಚಾರ್ಯ ಮಗುವಿನ ಚಿಕಿತ್ಸೆಗೆ ನೆರವಾಗಲು ಹೊಯ್ಸಳ ಟ್ರಸ್ಟ್ ನಾಡಾ ಇವರ ನೇತ್ರತ್ವದಲ್ಲಿ ಕುಂದಾಪುರ ವಾರದ ಸಂತೆಯ ಶನಿವಾರದಂದು ಸಹಾಯ ಧನ ಸಂಗ್ರಹಿಸಿದರು.
ಯಕ್ಷಗಾನ ಕಲಾವಿದ ನಂದೀಶ್ ಜನ್ನಾಡಿಯವರ ಸಹಕಾರದೊಂದಿಗೆ ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಆರೆಹೊಳೆ ಮಹಿಷಾಸುರ ವೇಷ ಧರಿಸಿ ಕುಂದಾಪುರದ ವಾರದ ಸಂತೆ ಹಾಗೂ ಪೇಟೆಯಲ್ಲಿ ಸಹಾಯಧನ ಸಂಗ್ರಹ ಮಾಡಿದರು.
ಬೆಂಕಿಮಣಿ ಸಂತು ಅರೆಹೊಳೆಯವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬಾಲಕನ ಚಿಕಿತ್ಸೆಗೆ ಸರಿಸುಮಾರು 40 ಲಕ್ಷ ರೂಪಾಯಿ ಅಗತ್ಯ ಇದ್ದು ,ಬಾಲಕನ ಹೆತ್ತವರು ದಿಕ್ಕು ತೋಚದಂತಾಗಿದ್ದಾರೆ.
ಹೆತ್ತವರು ಬಾಲಕನ ಚಿಕಿತ್ಸೆಗೆ ಸಹ್ರದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಧನ ಸಹಾಯ ಮಾಡುವವರು ಈ ಖಾತೆಗೆ ಹಣ ಸಂದಾಯ ಮಾಡಬಹುದು.
ಹೆಸರು : ಸುಮಂಗಳಾ, ಖಾತೆ ಸಂಖ್ಯೆ : 81920100004582
IFSC Code: BAROVJNADA
Bank of Baroda