ಹೆಮ್ಮಾಡಿ (ಏ, 15): ಚಿತ್ತೂರು -ಮಾರಣಕಟ್ಟೆ ಪರಿಸರದಲ್ಲಿ ಹಲವು ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿರುವ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ -ಚಿತ್ತೂರು ಇವರ 8ನೇ ವಾರ್ಷಿಕೋತ್ಸವ ಪ್ರೇರಣೋತ್ಸವ-21 ಇದೇ ಏಪ್ರಿಲ್ 17 ರ ಶನಿವಾರ ಸಂಜೆ 6.30ರಿಂದ ಮಾರಣಕಟ್ಟೆ ಸಮೀಪದ ನೈಕಂಬ್ಳಿ ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.
ಈ ಪ್ರೇರಣೋತ್ಸವ – 21ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ .ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ ಇದರ ಪ್ರವರ್ತಕರಾದ ಕೃಷ್ಣಮೂರ್ತಿ ಮಂಜರವರು ವಹಿಸಲಿದ್ದಾರೆ. ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಹಾಗೆಯೇ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇದರ ಸ್ಥಾಪಕರಾದ ಚಂದ್ರಶೇಖರ ಶೆಟ್ಟಿ ಕೆರಾಡಿ, ಕರಾವಳಿ ಭಾಗದ ಸಾಂಸ್ಕೃತಿಕ ಚಿಂತಕ ದೀಪಕ್ ಶೆಟ್ಟಿ ಬಾರ್ಕೂರು, ಪ್ರೇರಣಾ ಯುವ ವೇದಿಕೆ(ರಿ) ನೈಕಂಬ್ಳಿ ಇದರ ಗೌರವಾಧ್ಯಕ್ಷರಾದ ರಾಮಚಂದ್ರ ಮಂಜರು, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಇದರ ರೂವಾರಿಗಳಾದ ವಸಂತ ಗಿಳಿಯಾರ್, ಚಿತ್ತೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ಪೂಜಾರಿ, ಕಟ್ಬೆಲ್ತೂರು ಗ್ರಾ.ಪಂ.ಅಧ್ಯಕ್ಷರಾದ ನಾಗರಾಜ್ ಪುತ್ರನ್, ವಿಶ್ವಕರ್ಮ ಸಂಘಟನೆ ಅಧ್ಯಕ್ಷ ದಿವಾಕರ ಆಚಾರ್ಯ, ಮುಂಬಯಿ ಉದ್ಯಮಿ ಸುಧಾಕರ ಶೆಟ್ಟಿ ಚಾರುಕೊಟ್ಟಿಗೆ, ಸುರೇಶ್ ಶೆಟ್ಟಿ ಕಲ್ಗದ್ದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಪ್ರೇರಣೋತ್ಸವ – 21 ರಲ್ಲಿ ರಘುರಾಮ ಶೆಟ್ಟಿ ನೈಕಂಬ್ಬಿ ಬೆಟ್ಟಿನಮನೆ ರವರಿಗೆ ‘ಕೃಷಿ ಋಷಿ’ ಪ್ರಶಸ್ತಿಯ ಪ್ರದಾನ ,ಪ್ರೇರಣಾ ಪುರಸ್ಕಾರ’ವನ್ನು ನಿವೃತ್ತ ಶಿಕ್ಷಕ ಕುಂಜ್ಞಾಡಿ ಮೇಲ್ಮನೆ ನಾರಾಯಣ ಶೆಟ್ಟಿ ಯವರಿಗೆ, ಸಿ.ಎ. ಗುರುರಾಜ್ ಶೆಟ್ಟಿ ದೇವಲ್ಕುಂದ ಪಟೇಲರ ಮನೆ ಯವರಿಗೆ ‘ಚಪ್ಪಾಳೆ’ ಪುರಸ್ಕಾರ, ಶೈಕ್ಷಣಿಕ ಸಾಧಕರಿಗೆ ‘ವಿದ್ಯಾ ಚೇತನಾ’ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಗಳ ನಡುವೆ ಪ್ರಹಸನ ಸ್ಪರ್ಧೆ ನಡೆಯಲಿದ್ದು, ಕಲಾಶಕ್ತಿ ತಂಡ ಕಣ್ಣುಕೆರೆ, ವಿ.ಆರ್.ಫ್ರೆಂಡ್ಸ್ ಸಾಸ್ತಾನ, ಭಾವನಾ ಕಲಾವಿದರು ಹಾವಂಜೆ, ಅಭಿನವ ಕಲಾತಂಡ ಕುಂದಾಪುರ ದುರ್ಗಾಶ್ರೀ ಬ್ರಹ್ಮಾವರ, ಕಲಾಸ್ಪೂರ್ತಿ ಕುಂದಾಪುರ ಭಾಗವಹಿಸಲಿದೆ.
ಅಂತರಾಷ್ಟ್ರೀಯ ಮಾಯಾಜಾಲ ಖ್ಯಾತಿಯ ಜಾದೂಗಾರ ಸತೀಶ ಹೆಮ್ಮಾಡಿಯವರ ಪ್ರಸ್ತುತಿಯಲ್ಲಿ ‘ಜಾದೂ ಜಾತ್ರೆ, ನೈನಾ ಆಚಾರ್ಯ ಮತ್ತು ತಂಡದವರಿಂದ ‘ಭಕ್ತಿ ನಾದಾರ್ಚನೆ’, ಯಕ್ಷಗುರು ನವೀನ್ ಕೋಟ ನಿರ್ದೇಶನದಲ್ಲಿ ಪ್ರೇರಣಾದಿಂದ ಹೆಜ್ಜೆ ಕಲಿತ ಪ್ರತಿಭೆಗಳಿಂದ ಯಕ್ಷರೂಪಕ ‘ಪಂಚವಟಿ’ ಹಾಗೂ ಪುಟಾಣಿಗಳ ಕಿರು ಹೆಜ್ಜೆಯಲ್ಲಿ ಕುಣಿಯೋಣ ಬಾರ ಪ್ರದರ್ಶನಗೊಳ್ಳಲಿದೆ ಎಂದು ಪ್ರೇರಣಾ ಯುವ ವೇದಿಕೆ(ರಿ) ನೈಕಂಬ್ಳಿ -ಚಿತ್ತೂರಿನ ನಾಗರಾಜ್ ನೈಕಂಬ್ಳಿ ತಿಳಿಸಿದ್ದಾರೆ.