ಹೋಟೆಲ್ ಕಾರ್ಮಿಕರೆಂದರೆ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹು ಸಂಖ್ಯಾತರಲ್ಲಿ ಪ್ರಮುಖವಾದ ಬಡ ಮತ್ತು ಮಧ್ಯಮ ವರ್ಗದವರ ಒಂದು ಸಮುದಾಯ. ಸಣ್ಣ ಪುಟ್ಟ ಹೋಟೆಲ್ ಕ್ಯಾಂಟೀನ್ ಬೇಕರಿ ಇತ್ಯಾದಿ ವ್ಯಾಪಾರ ಮಾಡಿಕೊಂಡು ತಮ್ಮ ದಿನನಿತ್ಯಕ್ಕೆ ಬೇಕಾಗುವಷ್ಟು ಸಂಪಾದನೆ ಮಾಡಿಕೊಂಡು, ತಮ್ಮ ಸಂಸಾರ ,ತಂದೆ ತಾಯಿಯನ್ನು ಸಾಕಿಕೊಂಡು ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಅತೀ ಸುಖದಲ್ಲಿ ಇಲ್ಲದಿದ್ದರೂ ಸಹ ತಕ್ಕ ಮಟ್ಟಿನ ಸಂತೋಷ ಜೀವನ ಸಾಗಿಸುತ್ತ ಬದುಕಿನ ದಿನ ದುಡುತ್ತಿರುವ ಈ ವರ್ಗ ಇಂದು ಕರೋನಾ ತಂದ ಆಪತ್ತಿನಿಂದಾಗಿ ದಿಕ್ಕುತೋಚದೆ ಕೈ ಕಟ್ಟಿ ಕುಳಿತಿದೆ.
ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹೋಟೆಲ್ ಉದ್ಯಮದಲ್ಲಿ ಉಡುಪಿ, ದಕ್ಷಿಣ ಕನ್ನಡದವರೇ ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಕರೋನಾ ತಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿತ್ಯ ಜೀವನ ಸಾಗಿಸುವುದೇ ಕಷ್ಟವಾಗಿದ್ದು, ಅದೆಷ್ಟೋ ಹೋಟೆಲ್ ಉದ್ಯಮಿಗಳು ಮತ್ತು ಕಾರ್ಮಿಕರ ಬದುಕಿನ ದಿಕ್ಕು ಬದಲಿಸಿ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ಕಷ್ಟದಲ್ಲಿ ಇರುವ ಹೋಟೆಲ್ ಉದ್ಯಮ ಮತ್ತು ಕಾರ್ಮಿಕರು ಹಿಂದಿನದ ವರ್ಷದಲ್ಲಿ ಹೇರಲಾದ ಕರೋನ ಲಾಕ್ಡೌನ್ ನಿಂದ ಜೀವನ ನಿರ್ವಹಣೆಗೆ ಸಾಲ ಮಾಡಿ ಹೊಟ್ಟೆಯ ಹಸಿವನ್ನು ನೀಗಿಸಿಕೊಂಡು ಬದುಕಿರುವುದೇ ವಿಪರ್ಯಾಸ. ಕರೋನಾ ಮೊದಲ ಅಲೆಯ ಹೊಡೆತಕ್ಕೆ ಸಿಲುಕಿ ಹೊರ ಬರುವ ಮುನ್ನವೇ ಅದಕ್ಕಿಂತ ಗಂಭೀರವಾದ ಕರೋನ ಎರೆಡನೆ ಆಲೆ ಊರಿನ ತುಂಬಾ ರುದ್ರ ನರ್ತನ ತಾಂಡವವಾಡುತ್ತಿದೆ. ಲಾಕ್ಡೌನ್ ಮಾಡಿರುವುದರಿಂದ ಬದುಕು ಸಾಗಿಸುವುದಕ್ಕೆ ಕಂಗಲಾಗಿ ದಿಕ್ಕು ತೊಚ್ಚದೆ ಹೊಟ್ಟೆಗೆ ತಣೀರು ಬಟ್ಟೆ ಇಟ್ಟು ತಲೆಯ ಮೇಲೆ ಕೈ ಇಟ್ಟುಕೊಂಡು ಹೆಂಡತಿ ಮಕ್ಕಳ ಮುಖ ನೋಡಿ ಇತ್ತ ಬದುಕಲು ಆಗದೆ ಅತ್ತ ಸಂಪಾದನೆಗೆ ಇರುವ ಎಲ್ಲ ದಾರಿಗಳು ಮುಚ್ಚಿ ತ್ರಿಶಂಕು ಸ್ಥಿತಿಗೆ ಹೋಟೆಲ್ ಕಾರ್ಮಿಕರು ಹಾಗೂ ಉದ್ಯಮ ತಲುಪಿರುವುದು ಶೋಚನೀಯ.
ಕೋಟಿ ಕೋಟಿ ಜನರು ಹಸಿವು ಅಂತ ಬಂದರೆ ಬಿಸಿಬಿಸಿಯಾಗಿ ಬಡಿಸಿ ತನ್ನ ನೋವುಗಳನ್ನು ಮರೆತು ಬಂದವರಿಗೆ ಸಂತೋಷದ ನಗುಮುಖದಿಂದ ಸೇವೆ ಮಾಡುವ ಈ ವಲಯದ ಪರಿಸ್ಥತಿ ಇಂದು ಹೇಳತೀರದು.
ಹೋಟೆಲ್ ಉದ್ಯಮ ಹಾಗೂ ಕಾರ್ಮಿಕರು ಮತ್ತು ಅನೇಕ ಅಸಂಘಟಿತ ವರ್ಗಗಳ ಜೀವನ ನಿರ್ವಹಣೆಯ ಬಗ್ಗೆ ವಿಶೇಷ ಗಮನ ಹರಿಸಿ ನಮ್ಮನ್ನು ಆಳುವ ಸರ್ಕಾರ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ದಿನ ನಿತ್ಯದ ಅಗತ್ಯ ವಸ್ತುಗಳನ್ನು ನೀಡುವ ಘೋಷಣ ಮಾಡಿ, ಹಲವಾರು ಮನೆಯಲ್ಲಿ ಹಸಿವಿನಿಂದ ಮನೆಯ ದೀಪ ಆರುತ್ತಿರುವುದನ್ನು ಉರಿಸುವ ಪ್ರಯತ್ನ ನಡೆಸಲಿ.
ಎ.ಎಸ್ ಪೂಜಾರಿ, ಕಾಡಿನಕಲ್ಲು
ಇಡೂರು ಕುಂಜ್ಞಾಡಿ