ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ಔಷಧಿಯನ್ನು ಕಂಡು ಹಿಡಿಯಲು ಶ್ರಮ ಪಟ್ಟಿರುವ ಭಾರತ ಸೀರಮ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದವರು ಕರಾವಳಿಯ ಕನ್ನಡಿಗರಾದ ಬಾಂಡ್ಯ ಶ್ರೀಕಾಂತ ಪೈ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿ ಮೂಲದ ದಿವಂಗತ ಬಾಂಡ್ಯ ಅಣ್ಣಪ್ಪ ಪೈ ಅವರ ಪುತ್ರ ಬಾಂಡ್ಯ ಶ್ರೀಕಾಂತ ಪೈ. ಶ್ರೀಕಾಂತ ಪೈ ಯವರು ತಮ್ಮ ಈ ಸಾಧನೆಯ ಅನುಭವಗಳನ್ನು, ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್ ನಂತರವೂ […]
Day: May 27, 2021
ಗಂಗೊಳ್ಳಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ಕುಟುಂಬಗಳಿಗೆ ಮೀನುಗಾರಿಕಾ ಸವಲತ್ತುಗಳನ್ನು ವಿತರಿಸಿದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ
ಗಂಗೊಳ್ಳಿ (ಮೇ, 26): ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಏಳು ಅರ್ಹ ಕುಟುಂಬಗಳಿಗೆ ತಲಾ 3.90 ಲಕ್ಷ ರೂಪಾಯಿ ಮೌಲ್ಯದ ದೋಣಿ ಮತ್ತಿತರ ಮೀನುಗಾರಿಕಾ ಸಲಕರಣೆಗಳನ್ನು ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ವಿತರಿಸಿದರು.ಮೀನುಗಾರರು ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂಬ ಆಶಯದೊಂದಿಗೆ ಮೀನುಗಾರಿಕೆ ದೋಣಿ, ಇಂಜಿನ್, ಬಲೆ, ಲೈಫ್ ಜಾಕೆಟ್, ಶಾಖ ನಿರೋಧಕ ಪೆಟ್ಟಿಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕರು […]
ಮಂಗಳೂರು ವಿವಿ : ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಅಹ್ವಾನ
ಮಂಗಳೂರು ( ಮೇ, 26): ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರುವಿನ ಯೋಗ ವಿಜ್ಞಾನ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅಂಗೀಕೃತ ವಿ.ವಿ. ಯಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55 (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಟ ಶೇ. 50) ಅಂಕಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ವಿವಿಯ ವೆಬ್ ಸೈಟ್( www.mangaloreuniversity.ac.in) […]
ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ : ಹತ್ತು ದಿನಗಳ ಆನ್ಲೈನ್ ಬೇಸಿಗೆ ಶಿಬಿರ ಸಂಪನ್ನ
ಉಡುಪಿ (ಮೇ, 27): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮೇ 16 ರಿಂದ 25 ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ 10 ದಿನಗಳ “ಆನ್ಲೈನ್ ಬೇಸಿಗೆ ಶಿಬಿರ” ಸಂಪನ್ನಗೊಂಡಿದೆ. ಈ ಹತ್ತು ದಿನಗಳ ಶಿಬಿರದಲ್ಲಿ ಕಾಲೇಜಿನ 9 ತಂಡಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ವಿಂಗಡನೆ ಮಾಡಿ ಅವರಿಗೆ ವಿವಿಧ […]
ಮುರುಡೇಶ್ವರದ ಸತೀಶ್ ದೇವಾಡಿಗರ ಕಲೆಯ ಕೈಚಳಕಕ್ಕೆ ಮನಸೋತ ನಟ ಅರ್ಜುನ್ ಸರ್ಜಾ
ಬೈಂದೂರು (ಮೇ, 27): ಮುರುಡೇಶ್ವರದ ಪ್ರಸಿದ್ಧ ಮರದ ಕಲಾಕ್ರತಿ ರಚಿಸುವ ಕಲೆಗಾರ ಸತೀಶ್ ದೇವಾಡಿಗ ಇವರ ಅದ್ಭುತವಾದ ಮರದ ಕೆತ್ತನೆಗೆ ಮನಸೋತ ಭಾರತೀಯ ಚಿತ್ರರಂಗದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರು ಚೆನ್ನೈ ನಲ್ಲಿರುವ ತನ್ನ ಆರಾಧ್ಯ ದೇವರಾದ ಆಂಜನೇಯ ದೇವಾಲಯದ ಪ್ರವೇಶದ್ವಾರದ ಬಾಗಿಲುಗಳ ಮರದ ಕೆತ್ತನೆಯ ಕೆಲಸವನ್ನು ಸತೀಶ್ ದೇವಾಡಿಗರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಅರ್ಜುನ್ ಸರ್ಜಾರವರ ಅಳಿಯ ಚಿರಂಜೀವಿ ಸರ್ಜಾ ಹಾಗೂ ಅರ್ಜುನ್ ಸರ್ಜಾರ ಸಹೋದರ ಕಿಶೋರ್ ಸರ್ಜಾ […]