ವಂಡ್ಸೆ (ಜೂ, 13): ಕೊಡ್ಲಾಡಿ -ಮಾರ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಜೂನ್, 15 ರಿಂದ ಆರಂಭವಾಗಲಿದೆ. ಜುಲೈ ,1 ರಿಂದ ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆಗಳು ಆರಂಭವಾಗಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಪೂರ್ವ ಸಿದ್ಧತೆಗಳನ್ನು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ.
Covid-19ನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬಹುತೇಕ ಸೆಪ್ಟಂಬರ್ ವರೆಗೆ ಆಫ್ಲೈನ್ (ವಿದ್ಯಾರ್ಥಿಗೆ ನೇರ ಬೋಧನೆ) ತರಗತಿಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳನ್ನು Online ತರಗತಿಗಳಿಗೆ ಸಿದ್ಧಗೊಳಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರೂ ಕೂಡ ಪೂರ್ವ ಸಿದ್ದತೆಗಳನ್ನು ನಡೆಸಬೇಕಾಗುತ್ತದೆ. ರಜಾ ಅವಧಿಯಲ್ಲಿ ಕೋವಿಡ್ ಸೋಂಕಿತರ Contact Tracing ಹಾಗೂ Check Post ಕರ್ತವ್ಯದಲ್ಲಿ ನಿರತರಾಗಿದ್ದ ಶಿಕ್ಷಕರು ಈಗೇನಿದ್ದರೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಬೇಕಾಗಿರುತ್ತದೆ.

ಸೇತುಬಂಧ ಕಾರ್ಯಕ್ರಮ: ಹಿಂದಿನ ತರಗತಿಯ ಕಲಿಕಾಂಶಗಳನ್ನು ದೃಢೀಕರಿಸುವುದು ಹಾಗೂ ಕೊರತೆಯನ್ನು ನೀಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ . ಈ ಕಾರ್ಯಕ್ರಮವು ಒಂದು ತಿಂಗಳ ಅವಧಿಯದ್ದಾಗಿದ್ದು ಬಹುತೇಕ ಹೊಸ ಪಠ್ಯ ಪುಸ್ತಕಗಳು ಸರಬರಾಜು ಆಗುವ ತನಕ ಮುಂದುವರೆಯಲಿದೆ. ನಂತರ ಪ್ರಸ್ತುತ ವರ್ಷದ ಪಾಠ ಪ್ರವಚನಗಳು ಆರಂಭಿಸಲಾಗುತ್ತದೆ. ಈ ಎಲ್ಲ ಚಟುವಟಿಕೆಗಳನ್ನು Online ನಲ್ಲಿ ವ್ಯವಸ್ಥಿತವಾಗಿ ನಡೆಸಬಹುದಾಗಿದೆ. ಇದಕ್ಕೆ ಪೋಷಕರ ಸಂಪೂರ್ಣ ಸಹಕಾರದ ಅಗತ್ಯ.
Teachmint App: Online ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುವಲ್ಲಿ Teachmint ಎಂಬ ಹೊಸ App ನ್ನು ಪರಿಚಯಿಸಲಾಗುತ್ತಿದೆ. Teachmint App ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮುಕ್ತ ಸಂಭಾಷಣೆ ನಡೆಸಲು ಸಹಕಾರಿ. ಹಲವಾರು ರೀತಿಯ ಪ್ರಯೋಜನವನ್ನು ಹೊಂದಿರುವ ಈ ಆ್ಯಪ್ ವಿದ್ಯಾರ್ಥಿಗಳ ಸ್ವಯಂ ಚಾಲಿತ ಹಾಜರಾತಿ, ವೇಳಾಪಟ್ಟಿ, ರೆಕಾರ್ಡಿಂಗ್, ಅಸೈನ್ಮೆಂಟ್, ಸ್ಟಡಿ ಮೆಟೀರಿಯಲ್ ಇತ್ಯಾದಿ ಪ್ರಯೋಜನಗಳ ಮೂಲಕ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣದ ಗುಣಮಟ್ಟ ವನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಆದ್ದರಿಂದ ಎಲ್ಲಾ ಪೋಷಕರು Teachmint App ನ್ನು download ಮಾಡಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವ್ರಂದವನ್ನು ಸಂಪರ್ಕಿಸಲು ಈ ಮೂಲಕ ಸೂಚಿಸಲಾಗಿದೆ.










