ಕೋಟ (ಜೂ, 25): ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕೊಡುಗೈದಾನಿ ,ಉದ್ಯಮಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಆನಂದ .ಸಿ.ಕುಂದರ್ ರವರ ಸಂಚಾಲಕತ್ವದ ಗೀತಾನಂದ ಫೌಂಡೇಶನ್( ರಿ) ಮತ್ತು ಜನತಾ ಸಂಸ್ಥೆ ಜಂಟಿಯಾಗಿ “ಸೃಷ್ಠಿ” ಸಸಿಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರತಿ ವರುಷದಂತೆ ಈ ವರ್ಷವೂ ಸಹ ಸುಮಾರು 6000 ಗಿಡಗಳನ್ನು “ಸೃಷ್ಠಿ”ಕಾರ್ಯಕ್ರಮದಡಿಯಲ್ಲಿ ವಿತರಿಸುವ ಸಲುವಾಗಿ ಸಸಿಗಳನ್ನು ಸಂಗ್ರಹಿಸಲಾಗಿದೆ. ತಾರೆ, ಕುಂಟು ನೆರಳೆ, ಸಾಗುವಾನಿ, ಮುರಿಯ, ಬೀಟೆ, ಹಲಸು, ಮಾವು, ಕಾಡ ಬಾದಾಮಿ, ಶಿವಾನಿ, ದಾಲ್ಚಿನಿ, ಪೇರಳೆ, ಲಿಂಬೆ, ನೇರಳೆ, ಬಿಲ್ವೆರ, ಬಿಲ್ವಪತ್ರೆ, ಬಿದಿರು ಗಿಡಗಳು ಲಭ್ಯವಿದ್ದು, ಸಸಿಗಳನ್ನು ನೆಟ್ಟು ಪೋಷಿಸಲು ಆಸಕ್ತಿ ಇರುವ ಯಾವುದೇ ಸಂಘ ಸಂಸ್ಥೆಗಳು, ಸ್ಥಳೀಯರು ಮತ್ತು ಜನತಾ ಸಂಸ್ಥೆಯ ಸಿಬ್ಬಂದಿಗಳಿಗೆ “ಸೃಷ್ಠಿ” ಎನ್ನುವ ವಿನೂತನ ಯೋಜನೆಯಡಿ ಸಸಿಗಳನ್ನು ವಿತರಿಸಲಾಗುತ್ತಿದೆ.
ಪರಿಸರದ ಕುರಿತಾದ ಕಾಳಜಿ ಹಾಗೂ ಆಸಕ್ತಿ ಹೊಂದಿರುವವರು ಶ್ರೀ ರವಿಕಿರಣ್ ಅವರನ್ನು ಸಂಪರ್ಕಿಸಿ (ಮೊ: +91 7618788545 ) ಸಸಿಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.