ತಲ್ಲೂರು (ಜು, 18) : ಕುಂದಾಪುರ ಕರಾವಳಿಯ ಪಂಚಗಂಗಾವಳಿ ನದಿತೀರದಲ್ಲಿ ಗಂಗಾವತಿಯ ಸೋನಾ ಮಸೂರಿ ಭತ್ತದ ತಳಿ ನಾಟಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಂದಾಪುರ ರೋಟರಿ ಕ್ಲಬ್ ಕೃಷಿಮಿತ್ರ ಯೋಜನೆಯಡಿಯಲ್ಲಿ ಉಪ್ಪಿನಕುದ್ರು ಗ್ರಾಮದಲ್ಲಿ ಪ್ರಯೋಗಿಕವಾಗಿ 1 ಎಕರೆ ಕೃಷಿ ಭೂಮಿಯಲ್ಲಿ ಪ್ರಾಯೋಗಿಕವಾಗಿ ನಾಟಿ ಮಾಡಿದ್ದೇವೆ ಎಂದು ಕುಂದಾಪುರ ರೋಟರಿ ಕ್ಲಬ್ ನೂತನ ಅಧ್ಯಕ್ಷರಾದ ಶ್ರೀ ಶಶಿಧರ್ ಹೆಗ್ಡೆ ಹೇಳಿದರು.
ಅವರು ಕುಂದಾಪುರದ ರೋಟರಿ ಕ್ಲಬ್ ಹಾಗೂ ಯುವ ಸ್ಪಂದನ ಕೇಂದ್ರ ಉಡುಪಿ ಹಾಗೂ ಜಿಲ್ಲಾ ರೈತ ಸಂಘ ತ್ರಾಸಿ ವಲಯದ ಸಂಯುಕ್ತ ಆಶ್ರಯದಲ್ಲಿ ಜುಲೈ,18 ರಂದು ತಲ್ಲೂರು ಸಮೀಪದ ಉಪ್ಪಿನ ಕುದ್ರುವಿನ ಪಂಚಗಂಗಾವಳಿ ನದಿ ತೀರದ ಕೃಷಿ ಭೂಮಿಯಲ್ಲಿ ಹಮ್ಮಿಕೊಂಡ ಗಂಗಾವತಿಯ ಸೋನಾ ಮಸೂರಿ ಭತ್ತದ ತಳಿ ನಾಟಿಕೃಷಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಭಾಗದಲ್ಲಿ ನಮ್ಮ ರೈತರು ಭತ್ತದ ವಿವಿಧ ತಳಿಗಳನ್ನು ನಾಟಿ ಮಾಡುತ್ತಿದ್ದು, ಇಂದು ನಮ್ಮ ಸಂಸ್ಥೆ ವಿವಿಧ ಸಂಘಟನೆಗಳ ಮೂಲಕ ಗಂಗಾವತಿ ತಾಲೂಕಿನ ಸೋನಾ ಮಸೂರಿ ಬತ್ತದ ತಳಿಯನ್ನು ಉಪ್ಪಿನಕುದ್ರು ಗ್ರಾಮದಲ್ಲಿ ಪ್ರಯೋಗಿಕವಾಗಿ 1ಎಕರೆ ನಾಟಿ ಮಾಡಲು ನಮ್ಮ ರೋಟರಿ ಸಂಸ್ಥೆ ಪ್ರವಾಸ ಮಾಡುತ್ತಿದ್ದೇವೆ. ನಮ್ಮ ಪ್ರಯೋಗ ಯಶಸ್ವಿಯಾದರೆ ಕರಾವಳಿ ಭಾಗದ ರೈತರು ಈ ತಳಿಯನ್ನು ಬಳಸಿಕೊಂಡು ಹೆಚ್ಚು ಆದಾಯವನ್ನು ಗಳಿಸಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀ ಕೆ .ಆರ್. ನಾಯ್ಕ್ ವಹಿಸಿಕೊಂಡಿದ್ದರು. ತ್ರಾಸಿ ವಲಯದ ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ರೋಟರಿ ಶ್ರೀ ರಾಘವೇಂದ್ರ ಚರಣ ನಾವಡ, ಕೃಷಿಕರಾದ ರಾಮಕೃಷ್ಣ ಐತಾಳ್, ರೋಟರಿ ಶಶಿಧರ್ ಶೆಟ್ಟಿ ಸಾಲ ಗೆದ್ದೆ, ಸ್ಥಳೀಯ ಕೃಷಿಕರಾದ ಅವಿನಾಶ್ ಹೊಳ್ಳ ಪ್ರಭಾಕರ್ ಮಧ್ಯಸ್ಥ, ಪ್ರದೀಪ್ ಹಾಗೂ ಮಹಾಬಲ ದೇವಾಡಿಗ ಉಪಸ್ಥಿತರಿದ್ದರುಪ್ರಯೋಗಿಕ ಸೋನಾಮಸೂರಿ ಕೃಷಿ ನಾಟಿಯನ್ನು ನಾಗರಾಜ್ ದೇವಾಡಿಗ ಇವರ ಮುಂದಾಳುತ್ವದಲ್ಲಿ ಹಮ್ಮಿಕೊಳ್ಳಲಾಯಿತು. ನಾಟಿ ಯಂತ್ರ ಚಾಲಕ ಮಹೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ರೋಟರಿ ವೆಂಕಟೇಶ್ ಗಾಣಿಗ ನಾವುಂದ ಸ್ವಾಗತಿಸಿದರು, ರೋಟರಿ ವೆಂಕಟೇಶ್ ಪ್ರಭು ವಂದಿಸಿದರು ಹಾಗೂ ನರಸಿಂಹ ಗಾಣಿಗ ಹರೇಗೋಡು ಕಾರ್ಯಕ್ರಮ ನಿರೂಪಿಸಿದರು .