ಬೆಂಗಳೂರು (ಆ, 08) : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದಲೂ ಕುಂದಾಪುರ ಭಾಗದ ಜನತೆ ಆಸಾಡಿ ಅಮವಾಸ್ಯೆದಿನದಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು, ಈ ಬಾರಿ ಆಗಸ್ಟ್ 08 ರ ಆಸಾಡಿ ಅಮವಾಸ್ಯೆಯೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಟಿಮ್ ಕುಂದಾಪುರಿಯನ್ ತಂಡದ ನೇತೃತ್ವದಲ್ಲಿ ರಾಜಾಜಿನಗರದ ಕದಂಬ ಸಾಮ್ರಾಟ್ ಸಭಾ ಭವನದಲ್ಲಿ ವೈಭವದಿಂದ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ದೀಪ ಬೆಳಗಿಸಿ ಹೊಂಬಾಳೆ ಅರಳಿಸುವ ಮೂಲಕ ಉದ್ಘಾಟಿಸಿದರು. ಯಕ್ಷಗಾನ ಸಂಘಟಕ ದೀಪಕ್ ಶೆಟ್ಟಿ ಮತ್ತು ಟೀಮ್ ಕುಂದಾಪುರಿಯನ್ ತಂಡದ ಪರವಾಗಿ ರಂಜಿತ್ ಶಿರಿಯಾರ ರಾಘವೇಂದ್ರ ಕಾಂಚನ್ ,ಗೋವಿಂದ ಬಾಬು ಪೂಜಾರಿ,ಅರುಣ್ ಕುಮಾರ್ ಕಲ್ಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಟ್ಟ ಮಕ್ಕಳಿಂದ ಕರಾವಳಿಯ ಸಾಂಸ್ಕೃತಿಕ ಛದ್ಮವೇಷ ಮತ್ತು ಯಕ್ಷಗಾನ, ನಾಗರಾಜ್ ತೆಕ್ಕಟ್ಟೆ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.
ವರದಿ : ರಾಘವೇಂದ್ರ ಹಾರ್ಮಣ್