ಕುಂದಾಪುರ (ಆ, 09) : ಕೋವಿಡ್ 19 ಎರಡನೇ ಅಲೆ ಮುಗಿದಿದ್ದು, ಮೂರನೆಯ ಅಲೆಯು ಮಕ್ಕಳ ಜೀವಕ್ಕೆ ಅಪಾಯ ಇರುವುದರ ಬಗ್ಗೆ ತಜ್ಞರ ವರದಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಚಿಕ್ಕಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸ ಬೇಕಾಗಿದ್ದು , ವಿಶೇಷವಾಗಿ ತಾಲೂಕಿನ ಸರಕಾರಿ ಶಾಲೆಯ ಪ್ರಾಥಮಿಕ ತರಗತಿಗಳಿಂದ ಹತ್ತನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆಯನ್ನು ನುರಿತ ವೈದ್ಯರಿಂದ ಮಾಡಿಸಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇದ್ದಲ್ಲಿ ಅಂತಹ ಮಕ್ಕಳಿಗೆ ಅಗತ್ಯದ ಪೌಷ್ಟಿಕಾಂಶಯುಕ್ತ ಔಷಧಗಳನ್ನು ನೀಡಿ ವಿಟಮಿನ್, ಕ್ಯಾಲ್ಸಿಯಂ, ಪ್ರೊಟೀನ್ ಯುಕ್ತ ಆಹಾರ ಔಷಧಗಳನ್ನು ಅಗತ್ಯವಾಗಿ ನೀಡಬೇಕಾಗಿದೆ.
ಈ ನಿಟ್ಟಿನಲ್ಲಿ ಕುಂದಾಪುರ ರೋಟರಿ ಸಂಸ್ಥೆಯ ವತಿಯಿಂದ ಕುಂದಾಪುರ ತಾಲೂಕಿನ ಸರಕಾರಿ ಶಾಲೆಗಳ ಮಕ್ಕಳಿಗೆ ಅಗತ್ಯವಿರುವ ಕ್ಯಾಲ್ಸಿಯಂ, ಪ್ರೋಟೀನ್ ಪೌಷ್ಟಿಕಾಂಶ ಯುಕ್ತ ಆಹಾರ ಹಾಗೂ ಔಷಧಗಳನ್ನು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ|ರಾಜೇಶ್ವರಿಯವರಿಗೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿಯ 3182ನ ಅಸಿಸ್ಟೆಂಟ್ ಗವರ್ನರ್ ರೋಟೇರಿಯನ್ ಪಿಎಚ್ಎಫ್ ಜಯಪ್ರಕಾಶ್ ಶೆಟ್ಟಿ , ಕುಂದಾಪುರ ರೋಟರಿಯ ಅಧ್ಯಕ್ಷರಾದ ಶಶಿಧರ್ ಹೆಗ್ಡೆಯವರು ಔಷಧಿಗಳನ್ನು ಹಸ್ತಾಂತರಿಸಿದರು.
ನಂತರ ನಡೆದ ಸಭೆಯಲ್ಲಿ ಅಧ್ಯಕ್ಷರಾದ RTN ಶಶಿಧರ್ ಹೆಗ್ಡೆ ಯವರು ಎಲ್ಲಾ ಸದಸ್ಯರುಗಳನ್ನು, ವೈದ್ಯರನ್ನು ಸ್ವಾಗತಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಯಪ್ರಕಾಶ್ ಶೆಟ್ಟಿ ಯವರು ರೋಟರಿ ಕ್ಲಬ್ ನ ಈ ಸೇವೆಯನ್ನು ಗುರುತಿಸಿ ಮಾತನಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ|ರಾಜೇಶ್ವರಿಯವರು ಔಷಧಿಗಳನ್ನು ಕೊಡಮಾಡಿದ ರೋಟರಿ ಕ್ಲಬ್ ಕುಂದಾಪುರಕ್ಕೆ ಧನ್ಯವಾದಗಳನ್ನು ಸಮರ್ಪಿಸಿದರು.
ರೋಟರಿಯ ಸದಸ್ಯರಾದ RTN ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, RTN ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, RTN ಕೆಸಿ ಶೆಟ್ಟಿ, RTN P. ಜಯಚಂದ್ರ ಶೆಟ್ಟಿ, RTN ಕೆ ಆರ್ ನಾಯಕ್, RTN ಸಾಲಗದ್ದೆ ಶಶಿಧರ ಶೆಟ್ಟಿ, RTN ರಾಘವೇಂದ್ರ ಗೋಪಾಡಿ, RTN ಮುತ್ತಯ್ಯ ಶೆಟ್ಟಿ, RTN ಪ್ರದೀಪ್ ವಾಜ್, RTN ವೆಂಕಟೇಶ್ ಮತ್ತು RTN ಶರತ್ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಕುಂದಾಪುರದ ಕಾರ್ಯದರ್ಶಿ Rtn K. S ಕಾಂಚನ್ ರವರು ವಂದನಾರ್ಪಣೆ ಸಲ್ಲಿಸುತ್ತ, ಈ ಕೊಡುಗೆಯ ಸಂಪೂರ್ಣ ಪ್ರಾಯೋಜಕತ್ವವನ್ನು ವಹಿಸಿಕೊಂಡ ಹಿರಿಯ ರೋಟರಿ ಸದಸ್ಯರಾದ ಚಿತ್ರ ಕಾರಂತ್ ರವರಿಗೆ ರೋಟರಿ ಸಂಸ್ಥೆ ಆಭಾರಿಯಾಗಿದೆ ಎಂದು ಹೇಳಿದರು.