ಕುಂದಾಪುರ (ಆ, 11) : ಬಸ್ರೂರಿನ ನಿವಾಸಿ, ಸರಕಾರಿ ಪ್ರೌಢಶಾಲೆ ಕೋಣಿಯ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗ ಹಾಗೂ ಶ್ರೀಮತಿ ಲಕ್ಷ್ಮೀ ಎಮ್, ಅಡಿಗರವರ ಪುತ್ರಿ ಪ್ರಣೀತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾಳೆ.
ಪ್ರಣೀತಾ ಹೇಳುವಂತೆ “ಭವಿಷ್ಯದಲ್ಲಿ ಎಂಜಿನಿಯರ್ ಆಗಿ ಸಮಾಜ ಕಟ್ಟುವ ಬಯಕೆ ನನಗಿದೆ , ಕರೋನಾ ಆತಂಕದ ಕ್ಲಿಷ್ಟ ಕಾಲದಲ್ಲಿಯೂ ಶಿಕ್ಷಕರ ನಿರಂತರ ಪ್ರೋತ್ಸಾಹ , ತಂದೆ ತಾಯಿಯವರ ಆಶೀರ್ವಾದದಿಂದ ಈ ಸಾಧನೆ ಕೈಗೂಡಿತು. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಪರೀಕ್ಷೆ ನಡೆಸಲೇಬೇಕೆಂದು ತೆಗೆದುಕೊಂಡ ನಿರ್ಧಾರವೇ ನನ್ನಂತಹ ಹಲವಾರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಕಾರಣವಾಯಿತು. ಆದ್ದರಿಂದ ನನ್ನ ಈ ಸಾಧನೆಯನ್ನು ಮಾಜಿ ಸಚಿವ ಸುರೇಶ್ ಕುಮಾರ್ ,ನನ್ನ ಹೆತ್ತವರಿಗೆ ಹಾಗೂ ಶಾಲೆಗೆ ಅರ್ಪಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಪ್ರಣೀತಾಳ ಸಾಧನೆಗೆ ಸಂಸ್ಥೆಯ ಸಂಚಾಲಕರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ , ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.