ಮಂಗಳೂರು (ಆ, 24) : ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಯಾದ ವಿಜ್ಞಾನ ಭಾರತಿ ಯ ಕರ್ನಾಟಕದ ಘಟಕವಾದ ಸ್ವದೇಶಿ ವಿಜ್ಞಾನ ಆಂದೋಳನ – ಕರ್ನಾಟಕ’ ಸಂಸ್ಥೆ ಇದೇ ಸೆಪ್ಟೆಂಬರ್ 15 ರಿಂದ 17ರ ವರೆಗೆ 16ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ, ಮಂಗಳ ಗಂಗೋತ್ರಿಯ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಈ ವಿಜ್ಞಾನ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಈ ಕೆಳಗಿನ 2 ವಿಭಾಗಗಳಲ್ಲಿ ಏರ್ಪಡಿಸಲಾಗಿದೆ.
1ನೇ ವಿಭಾಗ :- 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ
2ನೇ ವಿಭಾಗ :- ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ
ವಿಷಯ :- “ಜಗತ್ತಿಗೆ ಭಾರತೀಯ ವಿಜ್ಞಾನ ಪರಂಪರೆಯ ಕೊಡುಗೆ”

ಎಂಬ ವಿಷಯದಲ್ಲಿ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆಯು ನಡೆಯಲ್ಲಿದ್ದು ,ಪ್ರಬಂಧವು 750 ಪದಗಳಿಗೆ ಮೀರದಂತೆ ಸಾಧ್ಯವಿದ್ದಲ್ಲಿ ತಮ್ಮ ಬರವಣಿಗೆಯನ್ನು ಟೈಪ್ ಮಾಡಿ ಅಥವಾ ಸುಂದರ ಅಕ್ಷರಗಳಲ್ಲಿ ಸ್ಪಷ್ಟವಾಗಿ ಬರೆದು Capt Ganesh Karnik, 8th Floor, Rama Bhavana Complex, Kodiyalbail, Mangaluru – 575003 ವಿಳಾಸಕ್ಕೆ ಅಥವಾ captkarnik@gmail.com ಗೆ ಇಮೈಲ್ ಮೂಲಕ ಸಪ್ಟೆಂಬರ್, 10 ರ ಸಂಜೆ 6 ಗಂಟೆಗೆ ಮುಂಚಿತವಾಗಿ ಬರೆದು ಕಳುಹಿಸುವಂತೆ ತಿಳಿಸಲಾಗಿದೆ. ಆಯ್ದ ಪ್ರಬಂಧಗಳಿಗೆ ವಿಜ್ಞಾನ ಸಮ್ಮೇಳನದ ವೇದಿಕೆಯಲ್ಲಿ 2 ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.










