ಸಮಾಜದ ಎಲ್ಲಾ ವರ್ಗದವರಿಗೂ ಜಾತಿ, ಮತ, ಧರ್ಮ ಭೇಧಭಾವವಿಲ್ಲದೆ ಆರೋಗ್ಯ ಭದ್ರತೆ ನೀಡುವ ಸಲುವಾಗಿ ಪ್ರಾರಂಭಿಸಿದ ಡಾ. ಜಿ. ಶಂಕರ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆಯನ್ನು ಜನವರಿ 19 ರಂದು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ಎಸ್ ಬಲ್ಲಾಳ್ ರವರು ಹೆಲ್ತ್ ಕಾರ್ಡ್ ಬಿಡುಗಡೆ ಮಾಡುವುದರ ಮೂಲಕ ಯೋಜನೆಗೆ ಚಾಲನೆ ನೀಡಿದರು. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ, ಉಡುಪಿಯ ಪ್ರವರ್ತಕರು, ಯೋಜನೆಯ ಪ್ರಮುಖ ರೂವಾರಿ ಗಳಾದ ಡಾ. ಜಿ ಶಂಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಹೆ, ಮಣಿಪಾಲದ ಉಪಕುಲಪತಿಗಳಾದ ಡಾ. ಎಂ. ಡಿ. ವೆಂಕಟೇಶ್, ಪರ ಉಪಕುಲಪತಿಗಳಾದ ಡಾ.ಪಿ.ಎಲ್.ಎನ್.ಜಿ.ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ, ಇದರ ಅಧ್ಯಕ್ಷರಾದ ಕೆ. ಎಮ್. ಶಿವರಾಮ್, ಮೊಗವೀರ ಮಹಾಜನ ಸಂಘ(ರಿ) ಉಚ್ಚಿಲ ಇದರ ಅಧ್ಯಕ್ಷರಾದ ಜಯಾ. ಸಿ ಕೋಟ್ಯಾನ್, ಮಣಿಪಾಲ ಆಸ್ಪತ್ರೆಯ ಇನ್ಷೂರೇನ್ಸ್ ಮ್ಯಾನೇಜರ್ ಶ್ರೀಪತಿ, ಸಿಗ್ನಾ ಇನ್ಷೂರೇನ್ಸ್ ನ ಶ್ರೀ ನೀಲಾಂಜನ್ ಮತ್ತು ಪ್ರತಿನಿಧಿಗಳು, ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ , ಆಸ್ಪತ್ರೆಯ ಡೀನ್ ಡಾ.ಶರತ್ ರಾವ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀಮುತ್ತಣ್ಣ, ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ,ಇದರ ಮಾಜಿ ಅಧ್ಯಕ್ಷರಾದ ವಿನಯ್ ಕರ್ಕೇರಾ, ಎಮ್. ಎಸ್ .ಸಂಜೀವ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ, ಉಪಾಧ್ಯಕ್ಷರಾದ ರವೀಂದ್ರ ಶ್ರಿಯಾನ್, ರಮೇಶ್ ಕುಂದರ್, ವಿಶಾಲಾಕ್ಷೀ, ಸಲಹಾ ಸಮಿತಿಯ ಸದಸ್ಯರಾದ ಯತೀಶ್ ಕಿದಿಯೂರ್, ವಿಠ್ಠಲ ಕರ್ಕೇರಾ, ದೀಪಕ್ ರಾಜ್ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು.
ಈ ಯೋಜನೆಯನ್ನು ಜಿ. ಶಂಕರ್ ಫ್ಯಾ ಮಿಲಿ ಟ್ರಸ್ಟ್ (ರಿ) ಅಂಬಲಪಾಡಿ, ಉಡುಪಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ, ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಮಣಿಪಾಲ ಹಾಗೂ ಮಾಹೆ ಮಣಿಪಾಲದ ಸಹಕಾರದಲ್ಲಿ ನೀಡಲಾಗುತ್ತಿದ್ದು, ಈ ಬ್ರಹತ್ ಆರೋಗ್ಯ ಯೋಜನೆಯಡಿ 52 ಸಾವಿರ ಕಾರ್ಡುಗಳನ್ನು ವಿತರಿಸುವುದರ ಜೊತೆಗೆ ಎರಡು ಲಕ್ಷದ ಐವತ್ತು ಸಾವಿರ ಜನರು ಇದರ ಉಪಯೋಗವನ್ನು ಪಡೆಯಲಿದ್ದಾರೆ.