ಕುಂದಾಪುರ(ಸೆ.02): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದಿರೆ ಇದರ ನೂತನ ಆಡಳಿತದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪಿ.ಯು ಕಾಲೇಜು ವಿದ್ಯಾರ್ಥಿಗಳು ಮತ್ತು ಪೋಷಕರ ಅನುಕೂಲಕ್ಕಾಗಿ ಎಕ್ಸಲೆಂಟ್ ಆ್ಯಪ್ ಅನ್ನು ಹೊರತಂದಿದ್ದು ವಿಧಾನ ಪರಿಷತ್ನ ಸದಸ್ಯರಾಗಿರುವ ಶ್ರೀ ಎಸ್ ಎಲ್ ಭೋಜೆಗೌಡರವರು ಆಗಸ್ಟ್ 29 ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು.
ಆ್ಯಪ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಭೋಜೆಗೌಡರು ಅಪಾರ ಅನುಭವವುಳ್ಳ ಡಾ. ರಮೇಶ ಶೆಟ್ಟಿ ತಂಡಕ್ಕೆ ಶುಭವಾಗಲಿ ಮತ್ತು ತಂಡದ ಪ್ರಯತ್ನಕ್ಕೆ ತಕ್ಕಂತೆ ಈ ವಿದ್ಯಾ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳ ಬಾಳು ಬೆಳಗಲಿ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಸಬ್ಲಾಡಿ ಮಂಜಯ್ಯ ಶೆಟ್ಟಿ ಶುಭ ಹಾರೈಸಿದರು.
ಸುಜ್ಞಾನ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಆ್ಯಪ್ನ ವಿಷೇಶತೆಗಳನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪಿ.ಯು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಎಕ್ಸಲೆಂಟ್ ಆ್ಯಪ್: ಕರೊನ ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಆನ್ ಲೈನ್ ಸೀಮಿತವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಕ್ಸಲೆಂಟ್ ಆ್ಯಪ್ ಸಹಕಾರಿಯಾಗಿದೆ. ಆ್ಯಪ್ನಲ್ಲಿ ವಿದ್ಯಾರ್ಥಿಗಳ ಹಾಜರಾತಿ ದಾಖಲೆಗಳು, ಹೋಮ್ ವರ್ಕ್ ವಿಷಯಗಳು, ದಿನನಿತ್ಯದ ತರಗತಿಯ ವೇಳಾ ಪಟ್ಟಿ ,ತರಗತಿ ಶಿಕ್ಷಕರ ಮಾಹಿತಿಗಳು, ಪರೀಕ್ಷಾ ವೇಳಾ ಪಟ್ಟಿ ಮತ್ತು ಅಂಕ ಪಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಈ ಆ್ಯಪ್ ಒಳಗೊಂಡಿದೆ.