ಕೋಟ( ಸೆ.06) : ನೊಂದವರಿಗೆ ನೆರವಿನ ದಾರಿ ದೀಪ ವಾಗಿರುವ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್ ಬಹುಬಗೆಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವುದರ ಜೊತೆಗೆ ನೊಂದವರಿಗೆ ಸಹಾಯ ಹಸ್ತ ಚಾಚಲು ಅರ್ಥಪೂರ್ಣ ಯೋಜನೆಗಳನ್ನು ಹಾಕಿಕೊಂಡಿದೆ.
ಆ ನಿಟ್ಟಿನಲ್ಲಿ ಟ್ರಸ್ಟ್ ನ 41ನೇ ತುರ್ತು ಚಿಕಿತ್ಸಾ ನೆರವು ಯೋಜನೆ-ಸಹಾಯ ಧನ ಹಸ್ತಾಂತರ ಕಾರ್ಯಕ್ರಮ ಸಪ್ಟೆಂಬರ್, 5 ರಂದು ನೆರವೇರಿತು. ಗುರುಪ್ರಸಾದ್ ಎನ್ನುವ ವ್ಯಕ್ತಿ ಟಿಪ್ಪರ್ ಲಿಫ್ಟ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಟಿಪ್ಪರ್ ಸ್ಪರ್ಶಿಸಿತ್ತು. ವಿದ್ಯುತ್ ಶಾಕ್ ನಿಂದ ಗುರುಪ್ರಸಾದ್ ಅವರಿಗೆ ತೀವ್ರವಾಗಿ ಮೈ, ಕೈ, ಕಾಲು ಸುಟ್ಟು ಹೋಗಿದ್ದು, ಕೆ.ಎಂ.ಸಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಜೈ ಕುಂದಾಪ್ರ ಸೇವಾ ಸಂಸ್ಥೆ ರಕ್ತ ದಾನಿಗಳ ಸಹಾಯ ದಿಂದ ರಕ್ತ ಅವಶ್ಯಕತೆ ಇರುವ ಸಂದರ್ಭದಲ್ಲಿ ರಕ್ತದ ವ್ಯವಸ್ಥೆ ಮಾಡಿರುವುದರ ಜೊತೆಗೆ ಗುರುಪ್ರಸಾದ್ ರವರ ಕುಟುಂಬಕ್ಕೆ ದಾನಿಗಳ ಸಹಾಯದಿಂದ ಒಟ್ಟು ಮಾಡಿದ 10,000/- ರೂ ಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜೈ ಕುಂದಾಪ್ರ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪುಂಡಲೀಕ ಮೊಗವೀರ, ಗೌರವ ಅಧ್ಯಕ್ಷರಾದ ಶ್ರೀಕಾಂತ್ ಶಣೈ ಕೋಟ, ಪ್ರಧಾನ ಕಾರ್ಯದರ್ಶಿ ಜಯರಾಜ್ ಪಡುಕೆರೆ ಹಾಗೂ ಸಂಸ್ಥೆಯ ಗೌರವ ಸಲಹೆಗಾರರಾದ ದಿನೇಶ್ ಗಾಣಿಗ ಮತ್ತು ಸಂತೋಷ್ ಪಡುಕರೆ, ಪದಾಧಿಕಾರಿಗಳಾದ ಕೋಟ ಸಂತೋಷ್, ಮನೀಶ್ ಕುಲಾಲ್, ಅಕ್ಷಯ ಕೋಟ, ಸುರೇಶ್ ಶೆಟ್ಟಿ, ಸತ್ಯ ಪ್ರಕಾಶ್,ಶಿವರಾಜ್ ಪಡುಕರೆ, ಅಕ್ಷಿತ್ ಮೆಂಡನ್, ದಿನೇಶ್ ಕೋಟ, ಶಿವರಾಂ ಕೋಡಿ, ಸತೀಶ್ ಪಡುಕರೆ ಹಾಗೂ ಮಹಿಳಾ ಘಟಕದ ನಿರ್ವಾಹಕಿ ದಿವ್ಯಾ ಕುಂದಾಪುರ ಉಪಸ್ಥಿತರಿದ್ದರು.