ವಂಡ್ಸೆ(ಸೆ,11): ಕರಾವಳಿಯ ಸಾಂಸ್ಕೃತಿಕ ವೈಭವ ಸಾರುವ ಯಕ್ಷಗಾನ ಇಂದು ಜಗತ್ ಪ್ರಸಿದ್ದ ವಾಗಿದ್ದು , ಯಕ್ಷಗಾನ ಕಲಾವಿದರು ಸಂಘಟಿತರಾಗಿ ಹೊಸ ಟ್ರಸ್ಟ್ ಹುಟ್ಟುಹಾಕಿದ್ದು, ಕಲಾವಿದರು ಜೊತೆಗೆ ಕಾರ್ಮಿಕರನ್ನೂ ಸೇರಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಈ ಟ್ರಸ್ಟ್ ಸಮಾಜದೊಂದಿಗೆ ಸೇರಿ ಸೌಹಾರ್ದತೆಗೆ ದಾರಿಯಾಗಬೇಕು ಹಾಗೂ ಕಲಾವಿದರಿಗೆ, ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದು ಹೋಟೆಲ್ ಉದ್ಯಮಿ, ಸಹ್ರದಯಿ ಕೃಷ್ಣಮೂರ್ತಿ ಮಂಜ ಹೇಳಿದರು.
ಅವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟಿನೆಯಲ್ಲಿ ಮಾತನಾಡಿದರು.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅನುವಂಶೀಯ ಮೊಕ್ತೇಸರ ಸದಾಶಿವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗರಾಜ ಶೆಟ್ಟಿ ನೈಕಂಬ್ಳಿ, ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಕಲಾವಿದರ ಮಕ್ಕಳ ಪಿಯುಸಿ, ಪದವಿ ಶಿಕ್ಷಣಕ್ಕೆ ಪ್ರೇರಣಾ ನೈಕಂಬ್ಳಿ ಸಂಸ್ಥೆ ಮೂಲಕ ದತ್ತು ಪಡೆದು ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಶಂಕರ ಭಟ್ ಮಾರಣಕಟ್ಟೆ, ಟ್ರಸ್ಟ್ ಕಾನೂನು ಸಲಹೆಗಾರ ಶರತ್ ಕುಮಾರ್ ಶೆಟ್ಟಿ ಯಳೂರು, ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅರ್ಚಕ ವಿಘ್ನೇಶ್ವರ ಮಂಜ, ಮಂಜಯ್ಯ ಶೆಟ್ಟಿ ಚಿತ್ತೂರು, ರವಿ ಕೆಂಚನೂರು, ಯಕ್ಷಪ್ರೇಮಿ ಜಯರಾಮ ಶೆಟ್ಟಿ ಹೊಸೂರು, ಸ್ಥಳದಾನಿ ರಾಮಚಂದ್ರ ಮಂಜ ಮಾರಣಕಟ್ಟೆ, ಟ್ರಸ್ಟ್ ಅಧ್ಯಕ್ಷ ಐರ್ ಬೈಲ್ ಆನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಆಲೂರು ಉಪಸ್ಥಿತರಿದ್ದರು.
ಕಲಾವಿದ ಸಂಜೀವ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ಸಲಹೆಗಾರ ಆನಂತ ಹೆಗಡೆ ನಿಟ್ಟೂರು ಪ್ರಾಸ್ತಾವಿಕ ಮಾತನಾಡಿದರು. ಕೆ.ರಾಘುವೇಂದ್ರ ರಟ್ಟಾಡಿ ನಿರೂಪಿಸಿ,ವಂದನಾರ್ಪಣೆಗೈದರು.