ಬಂಟಕಲ್ (ಸೆ, 17) : ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಐಎಸ್ ಟಿಇ ಶಿಕ್ಷಕರ ಘಟಕದ ಸಹಯೋಗದೊಂದಿಗೆ ವಿಶ್ವ ಒಝೋನ್ ದಿನದ ಅಂಗವಾಗಿ “ಒಝೋನ್ ಪದರದ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು” ಎಂಬ ವಿಷಯದ ಬಗ್ಗೆ ತಾಂತ್ರಿಕ ಕಾರ್ಯಾಗಾರವನ್ನು 16 ಸಪ್ಟೆಂಬರ್ 2021ರಂದು ಆಯೋಜಿಲಾಗಿತ್ತು.
ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಕೇಶವ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇವರು ಒಝೋನ್ ಪದರದ ಬಗ್ಗೆ ಮತ್ತು ಭೂಮಿಯ ಹವಾಮಾನ ವೈಪರೀತ್ಯಗಳ ಮಾಹಿತಿಯನ್ನು ನೀಡಿದರು. ಹಾಗೆಯೇ ಒಝೋನ್ ಪದರದ ಸವಕಳಿಯ ಕಾರಣಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಗಾರವನ್ನು ಆನ್ಲೈನ್ ಮುಖಾಂತರ ನಡೆಸಲಾಯಿತು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರೀನಾ ಕುಮಾರಿ, ಪ್ರಾಧ್ಯಾಪಕರಾದ ಡಾ. ಸುಬ್ಬಲಕ್ಷ್ಮಿ ಎನ್ ಕಾರಂತ್, ಶ್ರೀಮತಿ ರವಿಪ್ರಭ ಮತ್ತು ಶ್ರೀಮತಿ ರೆನಿಟ ಶರೋನ್ ಮೆನಿನ್ ಇವರ ಸಹಕಾರದೊಂದಿಗೆ ಕಾರ್ಯಗಾರವನ್ನು ಆಯೋಜಿಲಾಗಿತ್ತು.