ಕುಂದಾಪುರ(ಸೆ,21): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದರಿ ಇದರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸಲೆಂಟ್ ಕಾಲೇಜು ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ರಿಷಿ ಮಯೂರ 224 ನೇ ರ್ಯಾಂಕ್ ಸಿಇಟಿ ಯಲ್ಲಿ ಪಡೆಯುವುದರ ಮೂಲಕ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 694 ಬಿ ಎನ್ ವೈ ಎಸ್ 731, ಪಶುವೈದ್ಯಕೀಯದಲ್ಲಿ 731, 224 ಅಗ್ರಿಕಲ್ಚರಲ್ ಬಿ.ಎಸ್ಸಿ ವಿಭಾಗದಲ್ಲಿ ರ್ಯಾಂಕ್ ಗಳಿಸಿರುತ್ತಾರೆ.
ಈ ಸಂದರ್ಭದಲ್ಲಿ ರಿಷಿ ಮಯೂರ ಯವರನ್ನು ಎಕ್ಸಲೆಂಟ್ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ನನ್ನ ಸಾಧನೆಗೆ ಸಹಕಾರಿಯಾಗಿರುವ ನನ್ನ ಕಾಲೇಜಿಗೆ ನಾನು ಅಬಾರಿಯಾಗಿದ್ದೇನೆ ಎಂದು ಸಾಧಕ ವಿದ್ಯಾರ್ಥಿ ರಿಷಿ ಮಯೂರ ಹೇಳಿದರು.
ಸುಜ್ಞಾನ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಡಾ. ಹೆಚ್ ರಮೇಶ್ ಶೆಟ್ಟಿ ಯವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮುಂದಿನ 2 ವರ್ಷಗಳ ಕುಂದಾಪುರ ಎಕ್ಸಲೆಂಟ್ ಕಾಲೇಜ ಮೂಲಕ ಸಿಐಟಿ, ಜೆಇಇ ಮತ್ತು ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಂದ ಅತ್ಯುತ್ತಮ ರ್ಯಾಂಕ್ ಗಳಿಸಲು ಬೇಕಾದ ಪೂರ್ವ ತಯಾರಿ ಮಾಡಿ ಕೊಳ್ಳುತಿದ್ದೇವೆ ಎಂದರು.
ಸುಜ್ಞಾನ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಶುಭ ಹಾರೈಸಿದರು. ಎಕ್ಸಲೆಂಟ್ ಹೈಸ್ಕೂಲ್ನ ಮುಖ್ಯೋಪಾಧ್ಯಾಯರಾದ ಉಷಾ ಕಿರಣ್ ಶೆಟ್ಟಿ ಮತ್ತು ರಿಷಿ ಮಯೂರ, ಪೋಷಕರಾದ ಡಾ. ಕೃಷ್ಣ ರಾವ್ ಹಾಗೂ ಸುಪ್ರಿಯ ಉಪಸ್ಥಿತರಿದ್ದರು.