ಮೂಡಬಿದ್ರೆ (ಅ, 04) : ಜೆ ಸಿ ಐ ಮೂಡಬಿದ್ರೆ ತ್ರಿಭುವನ್ ರೋಟರಿ ಕ್ಲಬ್ ಮೂಡಬಿದ್ರಿ ಟೆಂಪಲ್ ಟೌನ್ ಹಾಗೂ ಗಾಂಧಿ ವಿಚಾರ ವೇದಿಕೆ ಮೂಡಬಿದ್ರಿ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 2.10.2021 ರಂದು “ಗಾಂಧಿ ವಿಚಾರದ ಪ್ರಸ್ತುತತೆ” ಎನ್ನುವ ವಿಚಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕವಿಗಳು, ವಿಶ್ಲೇಷಕರು, ಚಿಂತಕರು ಆಗಿರುವ ಶ್ರೀ ಅರವಿಂದ ಚೊಕ್ಕಾಡಿ, ಸಹಶಿಕ್ಷಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಬೆಳ್ತಂಗಡಿ ಇವರು ಭಾಗವಹಿಸಿದ್ದರು. ತನ್ನ ಸರಳ ಚಿಂತನೆಯ ಮೂಲಕ ಗಾಂಧಿ ವಿಚಾರದ ಪ್ರಸ್ತುತತೆಯನ್ನು ವಿವರಿಸಿದರು. ಅಹಿಂಸೆ, ಸತ್ಯಾಗ್ರಹ ಗಳ ಕುರಿತು ಅವರು ಮಾತನಾಡುತ್ತಾ ಗಾಂಧೀಜಿಯವರು ಉಪ್ಪು, ಅಹಿಂಸೆಗಳಂತಹ ವಿಚಾರಗಳೊಂದಿಗೆ ಭಾರತವನ್ನು ವಿಶ್ವವ್ಯಾಪಿ ಗೊಳಿಸುವಲ್ಲಿ ಹೇಗೆ ಸಕ್ರಿಯರಾದರು ಮತ್ತು ಪ್ರಾಪಂಚಿಕವಾಗಿ ಮಹಾತ್ಮರಾದರು ಅನ್ನೋದನ್ನು ವಿವರಿಸಿದರು.
ಜೆಸಿಐ ಅಧ್ಯಕ್ಷ ಮಾರ್ಕ್ ಮೆಂಡೋನ್ಸಾ, ರೋಟರಿ ಕ್ಲಬ್ ಮೂಡಬಿದ್ರಿ ಟೆಂಪಲ್ ಟೌನ್ ಅಧ್ಯಕ್ಷ ರೋ. ರಮೇಶ್ ಕುಮಾರ್ ಮತ್ತು ಗಾಂಧಿ ವಿಚಾರ ವೇದಿಕೆ ಮೂಡಬಿದ್ರಿ ಇದರ ಸ್ಥಾಪಕ ಅಧ್ಯಕ್ಷರಾಗಿರುವ ಸಂತೋಷ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮೂಡಬಿದ್ರೆ ಟೆಂಪಲ್ ಟೌನ್, ಜೆಸಿ ಮೂಡಬಿದ್ರಿ ಮತ್ತು ಗಾಂಧಿ ವಿಚಾರ ವೇದಿಕೆ ಮೂಡಬಿದ್ರೆಯ ಸದಸ್ಯರು ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಭಾಗವಹಿಸಿದರು.