ಕೋಟ (ಅ, 12) : ಪ್ರತಿವರ್ಷದಂತೆ ಶ್ರೀ ಅಘೋರೇಶ್ವರ ಕಲಾರಂಗದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುತ್ತಿರುವ ಶ್ರೀಅಘೋರಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಮಾಜ ಸೇವಕ, ಮುಳುಗು ತಜ್ಞ, ಜೀವರಕ್ಷಕ, ಆಪದ್ಬಾಂಧವ. ಈಶ್ವರ ಮಲ್ಪೆ ಯವರನ್ನು ಆಯ್ಕೆಗೊಳಿಸಲಾಗಿದ್ದು ನವಂಬರ್ 13ರಂದು ಸಂಜೆ ಸಂಜೆ ಸಾಲಿಗ್ರಾಮದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಲಿದೆ ಎಂದು ಶ್ರೀ ಅಘೋರೇಶ್ವರ ಕಲಾರಂಗದ ಕಾರ್ಯದರ್ಶಿ ನಾಗರಾಜ್ ಐತಾಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪಡೆಯಲಿರುವ ಈಶ್ವರ ಮಲ್ಪೆಯನ್ನು ಮಾತನಾಡಿಸಿದಾಗ ಬಹಳ ಸಂತಸವನ್ನು ಹಂಚಿಕೊಂಡರು. ಈ ಪ್ರಶಸ್ತಿಗಾಗಿ ಒಂದು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾಕ್ಕಾಗಿ ,ಅಘೋರೇಶ್ವರ ಕಲಾರಂಗ ಸಂಸ್ಥೆಯನ್ನು ನಾವು ಹೃದಯಪೂರ್ವಕ ಅಭಿನಂದಿಸುತ್ತೇನೆ.
✍️ಈಶ್ವರ್ ಸಿ ನಾವುಂದ
ಚಿಂತಕ -ಬರಹಗಾರ











