ಅದೇನೋ ಗೊತ್ತಿಲ್ಲ .ಸುಮ್ಮನೆ ಕುಳಿತಾಗಲೆಲ್ಲಾ ನನ್ನನ್ನು ಕಾಡೋ ಪ್ರಶ್ನೆ ನಾನ್ಯಾಕೆ ಇಷ್ಟೊಂದು ಬದಲಾದೆ?ಸಮಯ ನನ್ನನ್ನ ಬದಲಿಸಿತಾ? ಇಲ್ಲ ಸಂದರ್ಭಕ್ಕೆ ತಕ್ಕ ಹಾಗೆ ಬದುಕುತ್ತಿರುವೆನಾ? ಇಲ್ಲ ಬದುಕಿನ ಚಂಚಲತೆ ನನ್ನನು ಬದಲಾಯಿಸಿತಾ? ಬಹುಶಃ ಉತ್ತರ ಸಿಗದ ಪ್ರಶ್ನೆ.
ಮೊದಲೆಲ್ಲ ನೋಡಿದ್ದನ್ನೆಲ್ಲ ಅಮ್ಮನ ಬಳಿ ಹಠ ಹಿಡಿದು ಕೊಡಿಸುವಂತೆ ಕೇಳುತ್ತಿದ್ದ ನಾನು ಈವಾಗ ಅವಶ್ಯಕತೆ ಇದ್ದರೂ ಅಮ್ಮನ ಬಳಿ ಕೇಳಲು ಹಿಂಜರಿಕೆ! ಕಾರಣವೇ ಇಲ್ಲದ ಜಗಳ ಆಡ್ತಾ ಇದ್ದೆ ಅಣ್ಣ ತಮ್ಮನ ಜೊತೆ. ಆದರೆ ಈಗ ಮಾತಾಡಲು ವಿಷಯ ಹುಡುಕುವಂತೆ ಆಗಿದೆ. ಅಜ್ಜನ ಜೊತೆ ಕಾಡಿಬೇಡಿ ತಿರುಗಾಡಲು ಹೋಗ್ತಾ ಇದ್ದೆ .ಆದರೆ ಈಗ ಹೊರಗಡೆ ಹೋಗುವ ಸ್ವತಂತ್ರ ಇದ್ದರೂ ಹೊರಗಡೆ ಹೋಗಲು ಮನಸ್ಸಿಲ್ಲ . ಆಗ ಅಪ್ಪ ಊರ ಹಬ್ಬಕ್ಕೆ ಕರೆದುಕೊಂಡು ಹೋಗಲಿ ಅಂತ ಹೇಳಿದ ಕೆಲಸವೆಲ್ಲ ಮಾಡ್ತಾ ಇದ್ದೆ. ಆದರೆ ಈಗ ಅಪ್ಪನೇ ಕರೆದರು ಹೋಗುವ ಬಯಕೆಯಿಲ್ಲ .ಎಷ್ಟೋ ವಿಚಾರಗಳು ನಮಗೆ ಗೊತ್ತಿಲ್ಲದೆ ಬದಲಾಗುತ್ತೆ.
ಒಮ್ಮೆ ಹಿಂತಿರುಗಿ ನೋಡಿದಾಗ ಅವಾಗಿನ ಮುಗ್ದತೆ ಈಗ ಯಾಕಿಲ್ಲ ಏನ್ನುವ ವಿಚಾರ ಪದೇ ಪದೇ ಕಾಡುತ್ತಿದೆ.ಎಷ್ಟೋ ಬಾರಿ ಬಾಲ್ಯದಲ್ಲಿ ಗೊತ್ತಿಲ್ಲದೆ ಮಾಡಿದ ತಪ್ಪು ಈವಾಗ ನೆನಪಿಸಿ ಕೊಂಡರೆ ಮುಖದಲ್ಲಿ ಒಂದು ನಗು ಮುಡಿಸುತ್ತೆ ! ಇಷ್ಟೊಂದು ಸಿಲ್ಲಿಯಾಗಿ ಆಡ್ತಾ ಇದ್ನಾ ಅಂತ. ಆದ್ರೆ ಇಂದು ತಮಾಷೆಗೆಂದು ಮಾಡುವ ಎಷ್ಟೋ ಕೀಟಲೆ ಇನ್ನೊಬ್ಬರಿಗೆ ಎಷ್ಟು ನೋವು ಕೊಟ್ಟಿದ್ದೆವೇ ಏನ್ನುದರ ಪರಿವೆ ನಮಗಿಲ್ಲ… ಸಮಯ ಬದಲಾಗುತ್ತೆ ನಿಜ ಆದರೆ ಆ ಮಗುವಿನ ಮನಸ್ಥಿತಿ ಯಾಕೆ ಇಷ್ಟೊಂದು ಬದಲಾಯ್ತು .
ಒಮ್ಮೆಮ್ಮೆ ಅನಿಸ್ತಾ ಇರುತ್ತೆ ,ನನ್ನ ಬಾಲ್ಯದ ಮೇಷ್ಟ್ರು ಯಾವಾಗಲೂ ಹೇಳುವ ಮಾತು ನೀವು ಈ ಶಾಲೆ ಬಿಟ್ಟು ಹೋದಮೇಲೆ ನಿಮ್ಮ ಜೊತೆಗೆ ಈ ಮುಗ್ದತೆ ಮಾಯವಾಗುತ್ತೆ ಎನ್ನುವ ಮಾತು . ನಿಜಕ್ಕೂ ಅದಂತೂ ನಿಜ .ಬಾಲ್ಯ ಯಾವತ್ತೂ ನಮ್ಮಿಂದ ದೂರಾಗುತ್ತೋ ಅವತ್ತೇ ನಮ್ಮ ಬಾಲಿಶ ಕೂಡ ಮಾಗವಾಗುತ್ತೆ. ಎಷ್ಟೋ ವಿಚಾರ ಅರಿವಿದ್ದರೂ ಸ್ವಾರ್ಥದ ಮಡುವಿಗೆ ಬಿದ್ದು ತಿಳಿದು ತಪ್ಪನ್ನ ಮಾಡ್ತೇವೆ. ಇದೇ ಜೀವನ ಅಲ್ವೇ ….
ಯಾರು ಎಷ್ಟೇ ಒಳ್ಳೆಯವ್ರೆ ಆದ್ರೂ ಕೂಡ ಜೀವನ ಅಂತ ಬಂದಾಗ ನಮ್ಮಲ್ಲಿನ ಆಸೆ ಆಮಿಷಗಳಿಗೆ ಒಳಗಾಗಿ ನಮ್ಮ ಬದುಕು ಸಾಗುತ್ತಾ ಇರುತ್ತೆ. ಹಾಗೆ ಎಷ್ಟ್ ಒಳ್ಳೆತನ ನಮ್ಮಲಿದ್ರು ಪ್ರತಿ ಬಾರಿ ಒಳ್ಳೆಯವರಾಗಿ ಬಾಳಲು ಅಸಾದ್ಯ. ಹಾಗೆ ನಮ್ಮ ಜೀವನದ ಬಗ್ಗೆ ಯಾವಾಗ ನಮಗೆ ಅರಿ ವಾಗುತ್ತೋ ಅವತ್ತಿಂದ ನಮ್ಮ ಆಲೋಚನೆಯ ದಿಕ್ಕನ್ನೇ ಬದಲಾಯಿಸಿ ಬಿಡುವುದಂತು ಕಂಡಿತಾ…. ಯಾಕೆ ಮಾನವನ ಜೀವನದಲ್ಲಿ ಮಾತ್ರ ಇಷ್ಟೊಂದು ಬದಲಾವಣೆ ? ಉತ್ತರ ಹುಡುಕುವ ಪ್ರಯತ್ನ ಜಾರಿಯಲ್ಲಿದೆ…..
ಸುಪ್ರೀತಾ ಶೆಟ್ಟಿ ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ