ಬಂಟಕಲ್ (ನ,10): ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕತಂತ್ರ ವಿಭಾಗದ ಐಎಸ್ಟಿಇ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ “ಆಳವಾದ ಕಲಿಕೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು‘ ಎಂಬ ವಿಷಯದ ಕುರಿತು ತಾಂತ್ರಿಕ ಕಾರ್ಯಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಬೆಂಗಳೂರಿನ ಟೆಕ್ವೆಡ್ ಲ್ಯಾಬ್ಸ್ ನ ಕಾರ್ಪೊರೇಟ್ ತರಬೇತುದಾರರಾದ ಶ್ರೀ ಮೊಹಮ್ಮದ್ ಆಮೀರ್ ರವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಇವರು ಆಳವಾದ ಕಲಿಕೆಯ ಕುರಿತು ವಿವರಿಸುತ್ತ, ಗುಗಲ್ನಲ್ಲಿ ಕಲಿಕಾ ವೇದಿಕೆಯನ್ನು ಉಪಯೋಗಿಸಿಕೊಂಡು ಕೆಲವು ಉದಾಹರಣೆಯನ್ನು ನೀಡಿದರು. ಆಳವಾದ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕೆಲವು ಆ್ಯಪ್ ಮತ್ತು ವಿವಿಧ ಸಾಧನಗಳ ಬಗ್ಗೆ ತಿಳಿಸಿದರು.
ಈ ಕಾರ್ಯಗಾರದಲ್ಲಿ 90 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಎಸ್ಟಿಇ ಘಟಕದ ಸಂಯೋಜಕರಾದ ಶ್ರೀ ಚೇತನ್ , ಆರ್, ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಭಟ್, ಪ್ರಾಧ್ಯಾಪಕರಾದ ಶ್ರೀಮತಿ ಸ್ನೇಹ ಎನ್.ಎಸ್. ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶ್ರುತಾ ವಿ. ಭಟ್ ಅತಿಥಿಗಳನ್ನು ಪರಿಚಯಿಸಿದರು. ಅನ್ವಿತಾ ಧನ್ಯವಾದಗೈದರು.