ಅಂಪಾರು (ನ,22): ಕನ್ನಡ ಜಾನಪದ ಪರಿಷತ್, ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಕುಂದಾಪುರ ತಾಲೂಕು ಘಟಕ, ಸಂಜಯ್ ಗಾಂಧಿ ಪ್ರೌಢ ಶಾಲೆ ಅಂಪಾರು, ಸಂಜಯ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ವಲಯ ಪ್ರಾಂತ್ಯ ಜಿಲ್ಲೆ317ಸಿ ಇವರ ಸಂಯುಕ್ತ ಆಶ್ರಯದಲ್ಲಿ ಜನರೆಡೆಗೆ ಹೋಗೋಣ, ಜಾನಪದ ಉಳಿಸೋಣ,ಜಾನಪದವೇ ಸತ್ಯ,ಜಾನಪದವೇ ನಿತ್ಯ,ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ-2021 ಇತ್ತೀಚೆಗೆ ಜರುಗಿತು.
ಈ ಕಾರ್ಯಕ್ರಮವನ್ನು ಮಾಜಿ ಶಾಸಕರು ಹಾಗೂ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಧರ್ಮ ದರ್ಶಿಗಳಾದ ಶ್ರೀ. ಬಿ.ಅಪ್ಪಣ್ಣ ಹೆಗ್ಡೆ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೂ ತನ್ನ ಪ್ರಭಾವ ಬೀರಿದೆ. ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ.ಭಾರತೀಯ ಸಂಸ್ಕೃತಿ ಪುರಾತನ ಸಂಸ್ಕೃತಿ,ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಿದೆ ಎಂದರು.
ಕನ್ನಡ ಜಾನಪದ ಸಂಸ್ಕೃತಿಯ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ.ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು,ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ.
ಈ ನಿಟ್ಟಿನಲ್ಲಿ ಡಾ.ಗಣೇಶ್ ಗಂಗೊಳ್ಳಿಯವರ ಸಾಧನೆ ಶ್ಲಾಘನೀಯ ಎಂದರು. ಡಾಕ್ಟರೇಟ್ ಪದವಿ ಪಡೆದ ಪ್ರತಿಭಾವಂತ ಸಾಧಕ ಡಾ.ನಿತ್ಯಾನಂದ ಶೆಟ್ಟಿ ಅಂಪಾರು, ಸಂಜಯ ಗಾಂಧಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಪ್ರಸ್ತುತ ಮಿಲಾಗ್ರೀಸ್ ಕಾಲೇಜು ಕಲ್ಯಾಣಪುರ ಉಡುಪಿ ಇಲ್ಲಿ ಸಹ ಪ್ರಾದ್ಯಾಪಕರಾಗಿ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸೇವೆ ಸಮಾಜಕ್ಕೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಗಣೇಶ್ ಗಂಗೊಳ್ಳಿ ಹಾಗೂ ಡಾ.ನಿತ್ಯಾನಂದ ಶೆಟ್ಟಿ ಅಂಪಾರು ಇವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಭಾರತಿ ಶೇಟ್ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ. ಅಶೋಕ್ ನಾಯ್ಕ್ ಕಾಜರ್ತಿ,ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಂಪಾರು, ಶ್ರೀಮತಿ. ಜ್ಯೋತಿ, ಮಾಜಿ ಸದಸ್ಯರು, ಜಿಲ್ಲಾ ಪಂಚಾಯತ್ ಕಾವ್ರಾಡಿ,ಲ.ಜಯಶೀಲ ಶೆಟ್ಟಿ ಕಂದಾವರ, ಅಧ್ಯಕ್ಷರು, ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ, ಶ್ರೀಮತಿ. ಜಯಲಕ್ಷ್ಮಿ ಶೆಟ್ಟಿ,ಗ್ರಾಮ ಪಂಚಾಯತ್ ಸದಸ್ಯರು ಅಂಪಾರು, ಶ್ರೀಮತಿ. ನಂದಿನಿ ,ಗ್ರಾಮ ಪಂಚಾಯತ್ ಸದಸ್ಯರು ಅಂಪಾರು, ಲ.ರತ್ನಾಕರ ಶೆಟ್ಟಿ,ಕುಂದಾಪುರ, ಕಿರಣ್ ಕುಮಾರ್ ಹೆಗ್ಡೆ, ಗ್ರಾಮಪಂಚಾಯತ್ ಸದಸ್ಯರು,ಜಯರಾಮ ಮುಖ್ಯ ಶಿಕ್ಷಕರು ಪೆರ್ಡೂರು, ಪ್ರಧಾನ ಕಾರ್ಯದರ್ಶಿಗಳು ಕನ್ನಡ ಜಾನಪದ ಪರಿಷತ್ ಕುಂದಾಪುರ,ಸರಸ್ವತೀ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಪಾರು, ಆಶಾ ಶೆಟ್ಟಿ ,ಹಿರಿಯ ಶಿಕ್ಷಕಿ ಸಂಜಯ್ ಗಾಂಧಿ ಆಂಗ್ಲಮಾದ್ಯಮ ಶಾಲೆ. ಅಂಪಾರು,ಲಯನ್ಸ್ ಕ್ಲಬ್ ಸದಸ್ಯರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಭಿವ್ರಧ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು,ಪೋಷಕರು, ವಿದ್ಯಾಭಿಮಾನಿಗಳು,ಊರವರು ಉಪಸ್ಥಿತರಿದ್ದರು.
ಶ್ರೀ. ಉದಯ್ ಕುಮಾರ್. ಬಿ.ಮುಖ್ಯ ಶಿಕ್ಷಕರು, ಸಂಜಯ್ ಗಾಂಧಿ ಪ್ರೌಢ ಶಾಲೆ ಅಂಪಾರು. ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್ ಕುಂದಾಪುರ. ಸ್ವಾಗತಿಸಿದರು.ಸುನೀತಾ.ಎಸ್. ಸದಸ್ಯರು. ಕನ್ನಡ ಜಾನಪದ ಪರಿಷತ್ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ. ಗೀತಾ ಪ್ರಭು ವಂದಿಸಿದರು