ಮೂಡಬಿದಿರೆ(ನ,27): ಇಲ್ಲಿನ ಶ್ರೀ ಧವಲಾ ಕಾಲೇಜಿನ ಫೌಂಡೇಶನ್ ಕೋರ್ಸ್ ಮತ್ತು ಮಾನವಹಕ್ಕುಗಳ ಸಂಘಟನೆಯ ಆಯೋಜನೆಯಲ್ಲಿ ನ,26 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಹಾವೀರ ಜೈನ್ ಉಪನ್ಯಾಸಕರು ಪಿಯು ಕಾಲೇಜ್ ಮೂಡಬಿದ್ರಿ ಇವರು ಆಗಮಿಸಿ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವ ಜನರು ಹೇಗೆ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳುವುದರ ಮೂಲಕ ಒಬ್ಬ ರಾಷ್ಟ್ರೀಯವಾದಿ ಸಮಾಜದ ಚಿಂತಕ ಆಗಬೇಕು ಎನ್ನುವುದರ ಬಗೆಗೆ ಬಹಳ ಪ್ರಮುಖವಾಗಿ ವಿಶ್ಲೇಷಿಸಿದರು.
ತಮ್ಮ ಭಾಷಣದಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಯನ್ನು ಸುದೀರ್ಘವಾಗಿ ವಿವರಿಸುವುದೊಂದಿಗೆ ಭಾರತ ದೇಶದ ಸಂವಿಧಾನದ ಆಶಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಪ್ರಯತ್ನಿಸಿದರು.
ಸಾಮಾಜಿಕ ಚಿಂತನೆ ತಮ್ಮ ಹಕ್ಕುಗಳ ಬಗೆಗಿನ ವಿಚಾರಗಳು ಹಾಗೂ ಕರ್ತವ್ಯಗಳ ಬಗೆಗಿನ ಚಿಂತನೆಗಳನ್ನು ಯುವಜನರು ರೂಢಿಸಿಕೊಂಡು ಬೆಳೆಯಬೇಕಾದ ಪ್ರಪಂಚಕ್ಕೆ ಬಹಳ ಅವಶ್ಯಕ ಎನ್ನುವ ವಿಚಾರವನ್ನು ತಮ್ಮ ಭಾಷಣದಲ್ಲಿ ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಸುದರ್ಶನ್ ಕುಮಾರ್ ವಿದ್ಯಾರ್ಥಿಗಳಿಗೆ ಸಂವಿಧಾನ ದಿನದ ಪ್ರತಿಜ್ಞೆಯನ್ನು ಬೋಧಿಸು ದರೊಂದಿಗೆ ಇಂದಿನ ಸಮಾಜದಲ್ಲಿ ಸಂವಿಧಾನಿಕ ಪ್ರಜ್ಞೆಯನ್ನು ಯುವಜನರು ಯಾಕೆ ಬೆಳೆಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಸುದೀರ್ಘವಾಗಿ ವಿವರಿಸಿದರು. ಫೌಂಡೇಶನ್ ಕೋರ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂತೋಷ್ ಶೆಟ್ಟಿ ಯವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.