ಕುಂದಾಪುರ (ಡಿ,06): ಅಪರಾಧಗಳು ಸಂಭವಿಸದಂತೆ ಎಚ್ಚರವಹಿಸುವುದು ನಮ್ಮ ಕರ್ತವ್ಯ.ಬದುಕಿನ ಭದ್ರತೆಗೆ ನೀವೆಲ್ಲರೂ ಪೋಲಿಸ್ನಂತೆಯೇ ಎಚ್ಚರದಲ್ಲಿ ಇರಬೇಕು. ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬದಲಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಪರಾಧಗಳು ನಮ್ಮ ಬದುಕಿನ ಕನಸನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಕೆಟ್ಟದನ್ನು ನಾವು ಯೋಚಿಸಬಾರದು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕುಂದಾಪುರ ಪೋಲಿಸ್ ಉಪಾಧೀಕ್ಷಕರಾದ ಶ್ರೀಕಾಂತ್ ಕೆ. ಕರೆ ನೀಡಿದರು. ಅವರು ಬಿ.ಬಿ. ಹೆಗ್ಡೆ ಕಾಲೇಜಿನವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜನೆಯ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಅನೇಕ ಹೊಸ ಹೊಸ ರೀತಿಯ ವಂಚನೆಯ ಜಾಲಗಳಿವೆ. ಅವುಗಳ ಪ್ರಚೋದನೆಗೆ ನಾವು ಒಳಗಾಗಬಾರದು. ಎಂದು ಕುಂದಾಪುರದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸದಾಶಿವ ಆರ್ ಗವರೋಜಿ ಎಚ್ಚರಿಸಿದರು.
ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಸುಧಾ ಪ್ರಭು ಉಪಸ್ಥಿತಿರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡು, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಸ್ವಾಗತಿಸಿ, ಲೋನಾ ಡಿಸೋಜಾ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿ, ಎನ್ ಎಸ್ ಎಸ್ ಸಹಯೋಜನಾಧಿಕಾರಿ ರೇಷ್ಮಾ ಶೆಟ್ಟಿ ನಿರೂಪಿಸಿದರು. ಪೋಲಿಸ್ ಸಿಬ್ಬಂದಿಗಳು, ಬೋಧಕ ಮತ್ತು ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.